ಬುದ್ಧರ ವಿಚಾರಗಳು ಗ್ರಾಮೀಣ ಜನತೆಗೆ ತಲುಪಲಿ: ಅಹಿಂದ ಜವರಪ್ಪ

167

ಪ್ರಜಾಸ್ತ್ರ ಸುದ್ದಿ

ಮೈಸೂರು: ಬುದ್ಧರ ಸಂದೇಶಗಳು ಬರಿ ನಗರ ಪ್ರದೇಶಕ್ಕೆ ಸೀಮಿತವಾಗದೆ ಪ್ರತಿ ಹಳ್ಳಿ ಹಳ್ಳಿಗೂ ತಲುಪುವಂತಾಗಬೇಕು ಆಗ ಮಾತ್ರ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಹೇಳಿದರು.

ವಿಶ್ವ ಮೈತ್ರಿ ಬುದ್ಧ ವಿಹಾರದಲ್ಲಿ ತನುಮನ ಸಂಸ್ಥೆ, ಖ್ಯಾತ ಗಾಯಕ ಲಕ್ಷ್ಮಿ ರಾಮ್ ಮತ್ತು ತಂಡದವರಿಂದ ‘ಜಗ ನಡೆಯಲಿ ಬುದ್ಧನ ಕಡೆ’ ಅನ್ನೋ ಹುಣ್ಣಿಮೆಯ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ನಾವೆಲ್ಲ ಬಾಬಾ ಸಾಹೇಬರು ಕಂಡ ಕನಸನ್ನು ನನಸು ಮಾಡೋಣ. ಇಂತಹ ಒಳ್ಳೆಯ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಸಸಿಗೆ ನೀರುಣಿಸುವ ಮೂಲಕ ಕನ್ನಡ‌ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಮೇಯರ್ ಪುರುಷೋತ್ತಮ್ ಅವರು ಅಧ್ಯಕ್ಷತೆ ವಹಿಸಿದ್ದರು.

ಇಂಜಿನಿಯರ್ ಎಂ.ಆರ್.ವೆಂಕಟೇಶ್, ವೈದಕೀಯ ಅಧೀಕ್ಷಕರಾದ ಡಾ.ಗೋವಿಂದ ಶೆಟ್ಟಿ, ಗೃಹಸಾಲ ಸಲಹೆಗಾರ ಎಸ್.ಡಿ.ಸಣ್ಣಸ್ವಾಮಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪಿ.ರಾಘವೇಂದ್ರ ಅಪುರಾ ಅವರು ಕಾರ್ಯಕ್ರದಲ್ಲಿ ಹಾಜರಿದ್ದರು. ತನುಮನ ಸಂಸ್ಥೆಯ ಗಾಯಕರುಗಳಾದ ಲಕ್ಷ್ಮಿರಾಮ್, ಚಿಕ್ಕನಂದಿ ಮಾದೇಶ್, ಗಾಮನಹಳ್ಳಿ ಸ್ವಾಮಿ, ಮಲಾರ ಗಣೇಶ್, ಪ್ರೇಮಕುಮಾರಿ ಪುಷ್ಪ ಮತ್ತು ಲೀಲಾ ಸಂಗೀತ  ಕಾರ್ಯಕ್ರಮ ನಡೆಸಿ ಕೊಟ್ಟರು.




Leave a Reply

Your email address will not be published. Required fields are marked *

error: Content is protected !!