ಬ್ರೇಕಿಂಗ್ ನ್ಯೂಸ್
Search

ಕ್ರಿಕೆಟ್ ಪ್ರೇಮಿಗಳ ಎದೆಬಡಿತ ಹೆಚ್ಚಿಸಿದ ಪಂದ್ಯ

280

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿ ಕೊನೆಯ ಹಂತಕ್ಕೆ ಬಂದಿದೆ. ಬುಧವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದ ಪಾಕ್ ಫೈನಲ್ ಗೆ ಎಂಟ್ರಿಕೊಟ್ಟಿದೆ. ಹೀಗಾಗಿ ಗುರುವಾರ ನಡೆಯುವ ಭಾರತ-ಇಂಗ್ಲೆಂಡ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ಇಂಡಿಯನ್ ಕ್ರಿಕೆಟ್ ಪ್ರೇಮಿಗಳ ಎದೆಬಡಿತ ಹೆಚ್ಚಿಸಿದೆ.

ಸೌಥ್ ಆಫ್ರಿಕಾ ಸೋಲಿನಿಂದ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟ ಪಾಕ್ ಈಗ ಫೈನಲ್ ಗೆ ಹೋಗಿರುವುದು ಲಕ್ಕಿ ಎನ್ನಬಹುದು. ಈಗ ಇಡೀ ಜಗತ್ತಿನ ಕ್ರಿಕೆಟ್ ದಿಗ್ಗಜರು ಸೇರಿದಂತೆ ಕ್ರೀಡಾಸಕ್ತರ ಕಣ್ಣು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಮೇಲಿದೆ. ಗುರುವಾರ ಮಧ್ಯಾಹ್ನ 1.30ಕ್ಕೆ ಆಡಿಲೇಡ್ ಮೈದಾನದಲ್ಲಿ ನಡೆಯಲಿದೆ.

ಮಹತ್ವದ ಪಂದ್ಯದಲ್ಲಿ ಭಾರತ ಯಾವೆಲ್ಲ ಬದಲಾವಣೆ ಮಾಡುತ್ತೆ ಅನ್ನೋ ಕುತೂಹಲ ಮೂಡಿದೆ. ಇದುವರೆಗೂ ಅವಕಾಶ ನೀಡದ ಶ್ರೇಯಸ್ ಅಯ್ಯರ್ ಎಂಟ್ರಿ ಆಗುತ್ತಾ, ನೀಡಿದ ಅವಕಾಶ ಕೈ ಚೆಲ್ಲಿದಿ ದೀಪಕ್ ಹೂಡಾ ಹೊರಗೆ ಉಳಿದ ದಿನೇಶ್ ಕಾರ್ತಿಕ್ ಮರು ಆಗಮನವಾಗುತ್ತಾ, ರಿಷಬ್ ಪಂತ್ ವಿಚಾರ ಏನಾಗಬಹುದು ಅನ್ನೋ ಕುತೂಹಲವಿದೆ. ಬ್ಯಾಟಿಂಗ್ ನಲ್ಲಿ ರಾಹುಲ್, ಕೊಹ್ಲಿ, ಸೂರ್ಯಕುಮಾರ್, ಕಾರ್ತಿಕ್ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ನಾಯಕ ರೋಹಿತ್ ಒಂದು ಪಂದ್ಯದಲ್ಲಿ ಮಾತ್ರ ಅರ್ಧ ಶತಕ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಅರ್ಷದೀಪ್ ಸಿಂಗ್, ಆಲ್ ರೌಂಡರ್ ಪಾಂಡ್ಯ, ಅಶ್ವಿನ್, ಚಾಹಲ್, ಶಮಿ, ಭುವನೇಶ್ವರ್ ಕಮಾರ್ ಮಿಂಚುತ್ತಿದ್ದು, ಯಾರು ಇನ್ ಯಾರು ಔಟ್ ಅನ್ನೋದು ನೋಡಬೇಕು.

ಪಾಕ್ ಫೈನಲ್ ಗೆ ಹೋಗಿರುವುದರಿಂದ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಟೀಂ ಸೋಲಿಸಿ ಭಾರತ ಫೈನಲ್ ಗೆ ಹೋಗುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಚಾಂಪಿಯನ್ ಟೂರ್ನಿಯಲ್ಲಿ ಪಾಕ್ ಎದುರಿನ ಸೋಲಿಗೆ ಭಾರತ ತಿರುಗೇಟು ನೀಡಲು ಕಾಯುತ್ತಿದ್ದು, ಇವತ್ತಿನ ಪಂದ್ಯವೇ ಒಂದು ರೀತಿಯ ಫೈನಲ್ ಎನ್ನುವಂತೆ ಇರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!