ಜೈನ ಮುನಿ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲ್ಲ: ಸಚಿವ ಪರಮೇಶ್ವರ್

135

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ ಪಡಿಸಲಾಗುತ್ತಿದೆ. ಅಲ್ಲದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಅನ್ನೋ ಕೂಗು ಎದ್ದಿದೆ. ಇದಕ್ಕೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್, ಇದನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ. ನಮ್ಮ ಪೊಲೀಸರು ಸಮರ್ಥರಾಗಿದ್ದಾರೆ. ಅವರು ನಿಭಾಯಿಸುತ್ತಾರೆ ಎಂದರು.

ಹುಬ್ಬಳ್ಳಿ ತಾಲೂಕಿನ ವರೂರಿನಲ್ಲಿ ಜೈನ ಮುನಿ ಗುಣಧರನಂದಿ ಮಹಾರಾಜರ ಭೇಟಿ ಬಳಿಕ ಸಚಿವರು ಮಾತನಾಡಿದರು. ಹತ್ಯೆಯ ತನಿಖೆಯಲ್ಲಿ ತಾರತಮ್ಯದ ಆರೋಪ ಕೇಳಿ ಬಂದಿರುವುದು ನಿನನಗೂ ಬೇಜಾರು ತಂದಿದೆ. ಆದರೆ, ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಜೈನ ಮುನಿಗಳು ಉಪವಾಸದಲ್ಲಿದ್ದು ಅವರೊಂದಿಗೆ ಮಾತನಾಡಿ ಭರವಸೆ ನೀಡಿದ್ದೇನೆ ಎಂದರು.

ತನಿಖೆ ಶುರುವಾಗಿದೆ. ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತ್ಯಾಸತ್ಯತೆ ಹೊರ ಬರುತ್ತೆ. ಸುಮ್ನೆ ವಿರೋಧ ಪಕ್ಷದ ನಾಯಕರು ಆಪಧನೆ ಮಾಡುವುದು ಸರಿಯಲ್ಲ ಅಂತಾ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!