ನಾಲ್ವರು ಉಗ್ರರು ಉಡೀಸ್

266

ಪ್ರಜಾಸ್ತ್ರ ಸುದ್ದಿ

ಜಮ್ಮು: ಕಣಿವೆ ನಾಡಿನಲ್ಲಿ ನಾಲ್ವರು ಉಗ್ರರನ್ನ ಎನ್ ಕೌಂಟರ್ ಮಾಡಲಾಗಿದೆ. ಜಮ್ಮುವಿನ ನಾಗ್ರೋಟಾದ ನಿಷೇಧಿತ ಟೋಲ್ ಪ್ಲಾಜಾ ಬಳಿ ಗುರುವಾರ ಬೆಳಗ್ಗೆ ಭದ್ರತಾ ಪಡೆ ಎನ್ ಕೌಂಟರ್ ಮಾಡಿದೆ.

ಇನ್ನು ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಯೋಧರು ಕಾರ್ಯಾಚರಣೆ ನಡೆಸಿದ್ದಾರೆ. ನಿಷೇಧ ಪ್ರದೇಶದಲ್ಲಿ ಭದ್ರತಾ ಪಡೆ ವಾಹನಗಳ ತಪಾಸಣೆ ನಡೆಸುವ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.

ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಕಾಡಿನೊಳಗೆ ಓಡಿ ಹೋಗಿರುವ ಮೂರ್ನಾಲ್ಕು ಜನ ಉಗ್ರರನ್ನ ಪತ್ತೆ ಹೆಚ್ಚುವ ಕೆಲಸ ನಡೆದಿದೆ.




Leave a Reply

Your email address will not be published. Required fields are marked *

error: Content is protected !!