ಜಮ್ಮು ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ: ಪ್ರಧಾನಿ

57

ಪ್ರಜಾಸ್ತ್ರ ಸುದ್ದಿ

ಉಧಂಪುರ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಉಧಂಪುರದಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಜಮ್ಮು ಕಾಶ್ಮೀರಕ್ಕೆ ಶೀಘ್ರದಲ್ಲಿ ರಾಜ್ಯ ಸ್ಥಾನಮಾನ ಸಿಗಲಿದೆ. ಆದಷ್ಟು ಬೇಗ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದಿದ್ದಾರೆ.

ಜಮ್ಮು ಕಾಶ್ಮೀರ ಈಗ ಸಂಪೂರ್ಣ ಬದಲಾಗಿದೆ. ಹೊರಗಿನಿಂದ ಹೊಸ ಹೊಸ ಕಂಪನಿಗಳು ಬರಲಿದೆ. ರೈಲು, ಸುರಂಗ ಮಾರ್ಗ, ರಸ್ತೆ ಆಗಲಿವೆ. ಈ ಮೂಲಕ ಇಲ್ಲಿನ ಜನರು ಭರವಸೆತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದರು.

ದಶಕಗಳ ಬಳಿಕ ಭಯೋತ್ಪಾದನೆ, ಕಲ್ಲು ತೂರಾಟವಿಲ್ಲದೆ, ಭಯವಿಲ್ಲದೆ ಚುನಾವಣೆ ನಡೆಯುತ್ತಿದೆ. 1992ರಲ್ಲಿ ಲಾಲ್ ಚೌಕ್ ನಲ್ಲಿ ತ್ರೀವರ್ಣಧ್ವಜ ಹಾರಿಸಲು ಕೈಗೊಂಡ ಏಕತಾ ಯಾತ್ರೆ ನೆನಪಿದೆ. 370ನೇ ವಿಧಿ ತೆಗೆಯಲು ವಿಪಕ್ಷಗಳು ಸವಾಲ್ ಹಾಕಿದ್ದವು. ಅದು ಸಾಧ್ಯವಾಗಿದೆ. ಈಗ ಜಮ್ಮು ಕಾಶ್ಮೀರ ಸಂಪೂರ್ಣ ಬದಲಾಗಿದ್ದು, ಜನರಲ್ಲಿ ನಂಬಿಕೆ ಮೂಡುತ್ತಿದೆ ಎಂದರು.

ಉಧಂಪುರ ಲೋಕಸಭೆಗೆ ಬಿಜೆಪಿಯಿಂದ ಜಿತೇಂದ್ರ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಜಮ್ಮು ಕಾಶ್ಮೀರದಿಂದ ಜುಗಲ್ ಕಿಶೋರ್ ಕಣಕ್ಕೆ ಇಳಿದಿದ್ದಾರೆ.




Leave a Reply

Your email address will not be published. Required fields are marked *

error: Content is protected !!