ಲಿಂಗನಕೊಪ್ಪ ಗ್ರಾಮದೇವಿ ಜಾತ್ರೆ: ಖಾಲಿ ಗಾಡಿ, ಟಗರಿನ ಕಾಳಗ

193

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದೇವಿಯ ಜಾತ್ರಾ ಮಹೋತ್ಸವ ಏಪ್ರಿಲ್ 21ರಿಂದ 29ರ ತನಕ ನಡೆಯಲಿದೆ. ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಹಲವು ಸ್ಪರ್ಧೆಗಳು, ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಖಾಲಿ ಗಾಡಿ ಓಡುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ 51 ಸಾವಿರ ರೂಪಾಯಿ ಇಡಲಾಗಿದೆ. ಇದು ಏಪ್ರಿಲ್ 14ರಂದು ನಡೆಯಲಿದೆ. ಏಪ್ರಿಲ್ 15ರಂದು ಟಗರಿನ ಕಾಳಗ ನಡೆಯಲಿದೆ. ಇದರಲ್ಲಿ ಓಪನ್ ಹಲ್ಲಿನ ಟಗರಿನ ಕಾಳಗ, 4 ಹಲ್ಲಿನ ಟಗರಿನ ಕಾಳಗ, 2 ಹಲ್ಲಿನ ಟಗರಿನ ಕಾಳಗ ಹಾಗೂ ಹಾಲು ಹಲ್ಲಿನ ಟಗರಿನ ಕಾಳಗ ಎಂದು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗಹಿಸುವವರು ಇಲ್ಲಿ ಕೊಟ್ಟಿರುವ ನಂಬರ್ ಗೆ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.




Leave a Reply

Your email address will not be published. Required fields are marked *

error: Content is protected !!