ಜೆಕೆ ಫಸ್ಟ್ ಹಿಂದಿ ಮೂವಿ ಫಸ್ಟ್ ಲುಕ್

977

ಚಂದನವನದ ನಟ ಜಯರಾಂ ಕಾರ್ತಿಕ ಅಲಿಯಾಸ ಜೆಕೆ ನಟಿಸ್ತಿರುವ ಫಸ್ಟ್ ಬಾಲಿವುಡ್ ಸಿನ್ಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈಗಾಗ್ಲೇ ಹಿಂದಿ ಸ್ಮಾಲ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡಿರುವ ಜೆಕೆ ಇದೀಗ ಬಿಟೌನ್ ಸಿನಿ ದುನಿಯಾದ ಕಡೆ ಹೆಜ್ಜೆ ಹಾಕಿದ್ದಾರೆ.

ಖ್ಯಾತ ಹಿರಿಯ ನಟ ರಾಜೇಶ ಖನ್ನಾ ನಟನೆಯ ಅಮರ್ ಪ್ರೇಮ ಚಿತ್ರದ ಸೂಪರ್ ಹಿಟ್ ಡೈಲಾಗ್ ‘ಓ ಪುಷ್ಪ ಐ ಹೇಟ್ ಟಿಯರ್ಸ್’ ಜೆಕೆ ಚಿತ್ರದ ಟೈಟಲ್ ಆಗಿದೆ. ದಿನಕರ ಕಪೂರ ನಿರ್ದೇಶನ ಮಾಡ್ತಿದ್ದು, ಅಮೂಲ್ಯ ದಾಸ ನಿರ್ಮಾಣ ಮಾಡ್ತಿದ್ದಾರೆ.

ನಟ ಜೆಕೆ ಜೊತೆಗೆ ಅನುಸ್ಮೃತಿ ಸರ್ಕಾರ್, ಕೃಷ್ಣ ಅಭಿಷೇಕ ಸೇರಿದಂತೆ ಅನೇಕರು ನಟಿಸ್ತಿದ್ದು, ಹಿಂದಿ ಧಾರವಾಹಿಗಳಲ್ಲಿ ಮಿಂಚಿ ಅಲ್ಲಿನ ಜನಕ್ಕೆ ಹತ್ತಿರವಾಗಿರುವ ಜೆಕೆಗೆ ಇದು ಹೊಸ ಚಾಲೆಂಜ್.




Leave a Reply

Your email address will not be published. Required fields are marked *

error: Content is protected !!