ರೈಲುಗಳ ಮುಖಾಮುಖಿ ಡಿಕ್ಕಿ: ಸಿಸಿಟಿವಿಯಲ್ಲಿ ಎದೆ ಝಲ್ ಎನಿಸೋ ದೃಶ್ಯ ಸೆರೆ

457

ಹೈದ್ರಾಬಾದ್: ಹೈದ್ರಾಬಾದ್ ನ ಕಾಚಿಗುಡ ರೈಲ್ವೆ ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಒಂದೇ ಟ್ರ್ಯಾಕ್ ಮೇಲೆ ಎರಡು ಟ್ರೇನ್ ಗಳು ಎದುರು ಬದುರು ಬಂದ ಪರಿಣಾಮ ಅನಾಹುತ ನಡೆದಿದೆ. ಅದರ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ 16 ಮಂದಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಡಿಕ್ಕಿಯಾದ ರಬಸಕ್ಕೆ ರೈಲಿನ ಹಿಂದಿನ ಭೋಗಿಗಳು ಮೇಲಕ್ಕೆ ಹಾರಿವೆ. ರೈಲಿನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿ ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!