ಒಂದೇ ತಿಂಗಳಲ್ಲಿ 2 ಸೆಮಿಸ್ಟರ್ ಪರೀಕ್ಷೆ ಖಂಡಿಸಿ ‘ಆಗ್ರಹ ದಿನ’ ಹೋರಾಟ

448

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ಥವಾಗಿದೆ. ಆನ್ಲೈನ್ ಕ್ಲಾಸ್ ನಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೂ ಒಳಗಾಗ್ತಿದ್ದಾರೆ. ಇದರ ನಡುವೆ ತಿಂಗಳಲ್ಲೇ ಎರಡು ಸೆಮಿಸ್ಟರ್ ಪರೀಕ್ಷೆ ನಡೆಸಲು ಕೆಲವು ವಿಶ್ವವಿದ್ಯಾಲಯಗಳು ಸಿದ್ಧವಾಗಿವೆ.

ವಿಶ್ವವಿದ್ಯಾಲಯಗಳ ಈ ಕ್ರಮವನ್ನ ಖಂಡಿಸಿ ಎಐಡಿಎಸ್ಓ ವತಿಯಿಂದ ಜೂನ್ 28, ಸೋಮವಾರ ‘ಆಗ್ರಹ ದಿನ’ವಾಗಿ ರಾಜ್ಯಾದ್ಯಂತ ಆಚರಿಸಲಾಗ್ತಿದೆ. ಪತ್ರ ಚಳವಳಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆ ಬಗ್ಗೆ ಸರ್ಕಾರವೇ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ಆದ್ರೆ, ಕೆಲ ವಿವಿಗಳು ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿರುವುದನ್ನ ಖಂಡಿಸಿ ಈ ಪತ್ರ ಚಳವಳಿಯಾಗಿದೆ.

ಮುಂದೂಡಲ್ಪಟ್ಟ ಹಿಂದಿನ ಪರೀಕ್ಷೆ ರದ್ದುಗೊಳಿಸಿ, ಮುಂದಿನ ಸೆಮಿಸ್ಟರ್‌ಗಳ ಪರೀಕ್ಷೆಯಾದರೂ ಸರಿಯಾಗಿ ನಡೆಸಲು ಒತ್ತಾಯಿಸಲಾಗಿದೆ. ರಾಜ್ಯದ ತುಂಬಾ ನಡೆದ ಸಮೀಕ್ಷೆಯಲ್ಲಿ ಭಾಗವಹಿಸಿದ 46 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಶೇಕಡ 91ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬೇಡ ಎಂದಿದ್ದಾರೆ ಎಂದು ಸಂಘಟನೆ ಸದಸ್ಯೆ ತೇಜಸ್ವಿನಿ ತಿಳಿಸಿದ್ದಾರೆ.

ಪದವಿ, ಸ್ನಾತಕೋತ್ತರ ಪದವಿ ಜೊತೆಗೆ ವೃತ್ತಿ ತರಬೇತಿ ಕೋರ್ಸ್ ಗಳ ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸಬಾರದು. ಎರಡೂ ಡೋಸ್ ಲಸಿಕೆ ತೆಗೆದುಕೊಳ್ಳುವ ತನಕ ಆಫ್ ಲೈನ್ ಕ್ಲಾಸ್ ನಡೆಸಬಾರದು. ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಅನ್ನೋ ಅವೈಜ್ಞಾನಿಕ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಅನ್ನೋ ಬೇಡಿಕೆಯಿಂದ ಸೋಮವಾರ ಎಐಡಿಎಸ್ಓ ಆಗ್ರಹ ದಿನ ಆಚರಿಸ್ತಿದೆ.


TAG


Leave a Reply

Your email address will not be published. Required fields are marked *

error: Content is protected !!