ಟ್ರಂಪ್ ಸುದ್ದಿಗೋಷ್ಠಿ: ಶ್ವೇತಭವನದ ಹೊರಗೆ ಗುಂಡಿನ ಸದ್ದು

356

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಶ್ವೇತಭವನದ ಒಳಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ನಡೆಸುತ್ತಿದ್ದರೆ, ಹೊರಗೆ ಗುಂಡಿನ ಸುದ್ದಿ ಕೇಳಿಸಿದೆ. ಇದರಿಂದಾಗಿ ಸುದ್ದಿಗೋಷ್ಠಿಯನ್ನ ಅರ್ಧಕ್ಕೆ ನಿಲ್ಲಿಸಿದ ಅವರು, ಹೊರಗೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ.

ಶ್ವೇತಭವನದ ಉತ್ತರದ ದಿಕ್ಕಿನಲ್ಲಿ ಯಾರೋ ಶಂಕಿತನೊಬ್ಬ ಗುಂಡು ಹಾರಿಸಿದ್ದಾನೆ. ಹೀಗಾಗಿ ರಕ್ಷಣಾತ್ಮಕವಾಗಿ ರಹಸ್ಯ ಪಡೆ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಆತನ ಉದ್ದೇಶ ಅನ್ನೋದು ಸಧ್ಯಕ್ಕೆ ತಿಳಿದಿಲ್ಲ ಎಂದಿದ್ದಾರೆ.

ಶ್ವೇತಭವನದಲ್ಲಿ ಪರಿಸ್ಥಿತಿ ಸಹಜವಾಗಿದೆ. ಆದ್ರೆ, ಉತ್ತರ ಭಾಗದ ಪ್ರದೇಶವನ್ನ ಬಂದ್ ಮಾಡಲಾಗಿದೆ. ರಕ್ಷಣಾ ಪಡೆ ಹಾಗೂ ಪೊಲೀಸ್ ವಾಹನಗಳು ಅವೆನ್ಯೂ ರಸ್ತೆಯಲ್ಲಿ ಬೀಡುಬಿಟ್ಟಿವೆ. ಪರಿಸ್ಥಿತಿ ಬಗ್ಗೆ ತಿಳಿದ ಟ್ರಂಪ್ ವಾಪಸ್ ಹೋಗಿ ಸುದ್ದಿಗೋಷ್ಠಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!