ಪ್ರಜಾಸ್ತ್ರ ಸುದ್ದಿ
ಚಿಟಗುಪ್ಪ: ಸೋಮವಾರ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಕರೋನಾ ಹಾವಳಿ ನಡುವೆಯೂ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉತ್ತಮ ಫಲಿತಾಂಶ ನೀಡಿದ್ದಾರೆ. ಅದೇ ರೀತಿ ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ನಂದಿನಿ ಪ್ರೌಢ ಶಾಲೆ ಸಹ ಉತ್ತಮ ಸಾಧನೆ ಮಾಡಿದೆ.
ನಂದಿನಿ ಶಾಲೆಯ ವಿದ್ಯಾರ್ಥಿನಿ ಶ್ರಷ್ಠಿ ಓಂಕಾರ ಶೇಕಡ 90.4 ಹಾಗೂ ನಯಾ ಬಕ್ಕಾರೆಡ್ಡಿ ಶೇಕಡ 74.72ರಷ್ಟು ಅಂಕ ಪಡೆದಿದ್ದಾರೆ. ಇವರಿಬ್ಬರು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷೆ ಮಾತೋಶ್ರೀ ಸಂಗಮ್ಮ ಮಠಪತಿ ಹಾಗೂ ಮುಖ್ಯಗುರುಗಳಾದ ಉಮಾಶ್ರೀ ತಿಳಿಸಿದ್ದಾರೆ.
ಶಾಲೆಯಿಂದ 8 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ರು. ಇದರಲ್ಲಿ 5 ವಿದ್ಯಾರ್ಥಿಗಳು ಅಗ್ರಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು, ಶಾಲೆಯ ಫಲಿತಾಂಶ ಶೇಕಡ 87.5ರಷ್ಟಿದೆ ಎಂದು ತಿಳಿಸಿದ್ದಾರೆ.