ಮೋದಿ-ಬೈಡನ್ ವಿಶೇಷ ಉಡುಗೊರೆ ವಿನಿಮಯ

143

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಸಿಕ್ಕಿದೆ. ಅಲ್ಲಿನ ಅಧ್ಯಕ್ಷ ಜೋ ಬೈಡನ್ ದಂಪತಿ ಮೋದಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇಂದು ಅಧ್ಯಕ್ಷ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಸೇರಿದಂತೆ ಗಣ್ಯರೊಂದಿಗೆ ಭೋಜನ ಮಾಡಲಿದ್ದು, ಈ ವೇಳೆ ಇಬ್ಬರು ನಾಯಕರ ನಡುವೆ ವಿಶೇಷ ಉಡುಗೊರೆಗಳ ವಿನಿಮಯವಾಗಲಿದೆ.

ಪ್ರಧಾನಿ ಮೋದಿ, ಕರ್ನಾಟಕದ ಶ್ರೀಗಂಧದ ಕಟ್ಟಿಗೆಯಲ್ಲಿ ರಾಜಸ್ಥಾನದ ಜೈಪುರದ ಕುಶಲಕರ್ಮಿಗಳು ತಯಾರಿಸಿದ ಪೆಟ್ಟಿಗೆಯನ್ನು ನೀಡಲಿದ್ದಾರೆ. ಅದರಲ್ಲಿ ಅತ್ಯಂತ ವಿಶೇಷವಾದ 7.5 ಕ್ಯಾರೆಟ್ ವಜ್ರ ನೀಡಿದ್ದು, ಕಾಶ್ಮೀರದ ಸೊಗಸಾದ ಪೇಪಿಯರ್ ಮಾಚೆ ಕಾಗದ ಹಾಗೂ ನಕ್ಖಾಶಿಯ ಸಕ್ತ್ಸಾಜಿಯರ್ ನ್ನು ತಯಾರಿಸಲಾಗಿದೆ. ಕೊಲ್ಕತ್ತಾದ ಅಕ್ಕಸಾಲಿಗರು ತಯಾರಿಸಿದ ಬೆಳ್ಳಿ ದೀಪ, ಪಶ್ಚಿಮ ಬಂಗಾಳದ ಕುಶಲಕರ್ಮಿಗಳು ತಯಾರಿಸಿದ ಬೆಳ್ಳಿ ತೆಂಗಿನಕಾಯಿ, ತಮಿಳುನಾಡಿನಿಂದ ಪಡೆದಿರುವ ಬಿಳಿ ಎಳ್ಳು, ಗುಜರಾತಿನ ಉಪ್ಪು ಸೇರಿದಂತೆ ಭಾರತೀಯ ಸಂಪ್ರದಾಯ ಸಾರುವ ಅನೇಕ ವಸ್ತುಗಳನ್ನು ಉಡುಗರೆಯಾಗಿ ನೀಡಲಿದ್ದಾರೆ.

ಇನ್ನು ಬೈಡನ್ ದಂಪತಿ, ಕೈಯಿಂದ ಮಾಡಲಾದ ಪುರಾತನ ಅಮೆರಿಕನ್ ಪುಸ್ತಕ ಗ್ಯಾಲಿ, ವಿಂಟೇಜ್ ಅಮೆರಿಕನ್ ಕ್ಯಾಮೆರಾ, ಜಾರ್ಜ್ ಈಸ್ಟಮನ್ ಅವರ ಮೊದಲ ಕೊಡಾಕ್ ಕ್ಯಾಮೆರಾದ ಪೇಟೆಂಟ್ ನ ಆರ್ಕೈವಲ್ ಫ್ಯಾಕ್ಸಿಮೈಲ್ ಪ್ರಿಂಟ್ ಹಾಗೂ ವನ್ಯಜೀವಿ ಛಾಗ್ರಹಣದ ಹಾರ್ಡ್ ಕವರ್ ಪುಸ್ತಕವನ್ನು ನೀಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!