ನ್ಯಾ.ಎನ್.ವಿ ರಮಣ ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ

248

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ರಮಣ ಸ್ವರನ್ ಶನಿವಾರ ಅಧಿಕಾರ ವಹಿಸಿಕೊಂಡರು. ಸುಪ್ರೀಂ ಕೋರ್ಟ್ ನ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರ ಅವಧಿ ಆಗಸ್ಟ್ 26, 2022ರ ವರೆಗೆ ಇರಲಿದೆ.

ಆಗಸ್ಟ್ 27, 1957ರಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನವರಂನಲ್ಲಿ ಜನಿಸಿದ್ದಾರೆ. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರು, ಆರಂಭದಲ್ಲಿ ತೆಲುಗು ಪತ್ರಿಕೆಯಲ್ಲಿ ಕೆಲಸ ಮಾಡಿದರು. ಮುಂದೆ ವಕೀಲ ವೃತ್ತಿಯನ್ನ ಆಯ್ಕೆ ಮಾಡಿಕೊಂಡು 1983ರಲ್ಲಿ ವಿಜಯವಾಡದಲ್ಲಿ ಕೆಲಸ ಪ್ರಾರಂಭಿಸಿದರು. ಮುಂದೆ ಹೈದ್ರಾಬಾದ್ ಗೆ ಬಂದರು. ಬಳಿಕ ಆಂಧ್ರಪ್ರದೇಶದ ಎಡಿಷನಲ್ ಅಡ್ವಕೇಟ್ ಜನರಲ್ ಆದರು.

2000ನೇ ಇಸ್ವಿಯಲ್ಲಿ ಆಂಧ್ರ ಹೈಕೋರ್ಟ್ ನ ಖಾಯಂ ಜಡ್ಜ್ ಆದರು. 2014ರ ಬಳಿಕ ಸುಪ್ರೀಂ ಕೋರ್ಟ್ ಗೆ ಆಯ್ಕೆ ಆದರು. 1966-67ರಲ್ಲಿ ನ್ಯಾಯಮೂರ್ತಿ ಕೆ ಸುಬ್ಬಾರಾವ್ ಬಳಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದ ಆಂಧ್ರಪ್ರದೇಶದ ಎರಡನೇ ವ್ಯಕ್ತಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!