ಗಂಭೀರ ಕಾಯಿಲೆ ನಡುವೆಯೂ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯ ಸಾಧನೆ

314

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗಂಭೀರ ಕಾಯಿಲೆಯಿಂದ ಬಳಲುತ್ತಿರುವ 16 ವರ್ಷದ ಸುಷ್ಮಾ ಅನ್ನೋ ವಿದ್ಯಾರ್ಥಿನಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶೇಕಡ 76ರಷ್ಟು ಅಂಕಗಳನ್ನ ಪಡೆದು ಕೀರ್ತಿ ತಂದಿದ್ದಾಳೆ.

ಸುಷ್ಮಾ ಕಳೆದ 2 ವರ್ಷಗಳಿಂದ ಜುವೆನೈಲ್ ಡರ್ಮಟೊಮಿಯೊಸಿಟಿಸ್ ಅನ್ನೋ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದೊಂದು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಉಸಿರಾಟದ ಸ್ನಾಯುಗಳು ಹಾಗೂ ಮೂತ್ರಪಿಂಡದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕ್ರೌಡ್ ಫಂಡಿಂಗ್ ಪ್ಲಾಟ್ ಫಾರ್ಮ್ ಸಹಕಾರದೊಂದಿಗೆ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ನೆರವು ನೀಡಿದ್ದಾರೆ.

ಇದೀಗ ಸುಷ್ಮಾ ಚೇತರಿಸಿಕೊಳ್ತಿದ್ದು, ಉಪನ್ಯಾಸಕಿಯಾಗಬೇಕು ಅನ್ನೋ ಕನಸು ಹೊತ್ತಿದ್ದಾಳೆ. ತನ್ನ ಜೀವ ಉಳಿಸಿದ ವೈದ್ಯರ ತಂಡಕ್ಕೆ ಕೃತ್ಞತೆಯನ್ನ ಸಲ್ಲಿಸಿದ್ದಾಳೆ. ತನ್ನ ಕನಸು ನನಸು ಮಾಡಲು ಸಮರ್ಥಳಾಗಿದ್ದೇನೆ ಎಂದಿದ್ದಾಳೆ. ವೈದ್ಯರು ಹೇಳುವ ಪ್ರಕಾರ ಜುವೆನೈಲ್ ಡರ್ಮಟೊಮಿಯೊಸಿಟಿಸ್ ಕಾಯಿಲೆಗೆ ಕಾರಣಗಳಿಲ್ಲ. ರೋಗನಿರೋಧಕ ವ್ಯವಸ್ಥೆಯ ಅಂಗಗಳು ಹಾಗೂ ಅಂಗಾಂಶಗಳ ಮೇಲೆ ಆಕ್ರಮಣ ಮಾಡುತ್ತದೆ ಎಂದು ಹೇಳಿದ್ದಾರೆ. ಇಷ್ಟೊಂದು ಜೀವನ್ಮರಣದ ಹೋರಾಟದ ನಡುವೆಯೂ ಸುಷ್ಮಾ ಎಸ್ಎಸ್ಎಲ್ ಸಿಯಲ್ಲಿ ಶೇಕಡ 76ರಷ್ಟು ಸಾಧನೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.




Leave a Reply

Your email address will not be published. Required fields are marked *

error: Content is protected !!