50 ಕೋಟಿ ಗಡಿದಾಟಿದ ಕಬೀರ್ ಸಿಂಗ್

439

ನಟ ಶಾಹಿದ್ ಕಪೂರ್ ಹಾಗೂ ನಟಿ ಕೈರಾ ಅಡ್ವಾನಿ ನಟನೆಯ ಕಬೀರ್ ಸಿಂಗ್ ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕಬೀರ್ ಸಿಂಗ್ ಸಿನಿ ಪ್ರಿಯರ ಮನಸ್ಸು ಗೆಲ್ಲುತ್ತಾ ಹೋಗ್ತಿದ್ದಾನೆ.

ಮೊದಲ ದಿನ 20.21 ಕೋಟಿ ಕಲೆಕ್ಷನ್ ಮಾಡಿದ್ದ ಮೂವಿ ಇದೀಗ 67.92 ಕೋಟಿ ಕಲೆಕ್ಷನ್ ಮಾಡಿದೆ ಅಂತಾ ಹೇಳಲಾಗ್ತಿದೆ. ಈ ಮೂಲಕ ಶಾಹಿದ್ ಕಪೂರ್ ಹಾಗೂ ಕೈರಾ ಅಡ್ವಾನಿಗೆ ಬಿಗ್ ಓಪನಿಂಗ್ ಸಿಕ್ಕಿದೆ ಅನ್ನೋ ಮಾತು ಬಿಟೌನ್ ಅಂಗಳದಲ್ಲಿ ಕೇಳಿ ಬರ್ತಿದೆ.

3,123 ಥಿಯೇಟರ್ ಗಳಲ್ಲಿ ಕಬೀರ್ ಸಿಂಗ್ ಮೂವಿ ರಿಲೀಸ್ ಆಗಿತ್ತು. ಸಿನಿಮಾಕ್ಕೆ ಎಲ್ಲರಿಂದ ಉತ್ತಮ ಪ್ರತಿಕ್ರೀಯೆ ಬರುತ್ತಿರುವುದಕ್ಕೆ ಸಿನಿ ತಂಡ ಖುಷಿಯಾಗಿದೆ.




Leave a Reply

Your email address will not be published. Required fields are marked *

error: Content is protected !!