ಮದುವೆ ಮಾಡಿಕೊಂಡು ತಪ್ಪು ಮಾಡಿದ್ಳಾ ಸಮಂತಾ?

384

ಟಾಲಿವುಡ್ ಬ್ಯೂಟಿ ಸಮಂತಾ ತನ್ನ ಮದುವೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಳೆ. ಇದಕ್ಕೆ ಕಾರಣ ಏನು ಅಂತಾ ನೋಡಿದ್ರೆ, ನಟಿ ಸಮಂತಾಗೆ ಯಾವುದೇ ಸಿನಿಮಾಗಳ ಆಫರ್ ಗಳು ಬರ್ತಿಲ್ಲಂತ ಕೋಪ ಮಾಡಿಕೊಂಡಿದ್ದಾಳೆ.

ಮದುವೆಗೂ ಮುಂಚೆ ನನ್ಗೆ ಸಾಕಷ್ಟು ಸಿನಿಮಾಗಳ ಆಫರ್ ಬರ್ತಿದ್ವು. ಆದ್ರೆ, ಮದುವೆ ನಂತರ ಸಿನಿಮಾಗಳ ಆಫರ್ ಕಡಿಮೆಯಾಗಿದೆ. ನನ್ನನ್ನ ಸಿನಿಮಾದಲ್ಲಿ ಹಾಕಿಕೊಂಡು ಮಾಡುವುದೇನಿದೆ ಅನ್ನೋ ನಿರ್ಧಾರಕ್ಕೆ ನಿರ್ಮಾಪಕರು ಬಂದಿರಬಹುದು ಅಂತಾ ನಟಿ ಸಮಂತಾ ಬೇಸರ ವ್ಯಕ್ತಪಡಿಸಿದ್ದಾಳೆ.

ನಟ ನಾಗಚೈತನ್ಯ ಹಾಗೂ ಸಮಂತಾ ಜೋಡಿ 2017ರಲ್ಲಿ ಭರ್ಜರಿಯಾಗಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ನಟಿ ಸಮಂತಾ ಟಾಲಿವುಡ್, ಕಾಲಿವುಡ್ ನ ಸೂಪರ್ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದಾಳೆ. ಇದೀಗ ಅವಳಿಗೆ ಸಿನಿಮಾ ಆಫರ್ ಕಡಿಮೆಯಾಗಿರುವುದಕ್ಕೆ ಮದುವೆಯಾಗಿದ್ದು ತಪ್ಪಾಗಿದೆ ಅಂತಿದ್ದಾಳೆ.




Leave a Reply

Your email address will not be published. Required fields are marked *

error: Content is protected !!