ಸಹಾಯದ ನಿರೀಕ್ಷೆಯಲ್ಲಿ ಕೆಜಿಎಫ್ ಚಾಚಾ

301

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಲರ್ ಫುಲ್ ದುನಿಯಾ ಆದ ಚಿತ್ರರಂಗವೇ ವಿಚಿತ್ರ. ಯಾಕಂದರೆ, ಯಾವ ಕಲಾವಿದರ ಪರಿಸ್ಥಿತಿ ಹೇಗೆ ಅನ್ನೋದೇ ಅರ್ಥವಾಗಲ್ಲ. ದಶಕಗಳಿಂದ ಚಿತ್ರರಂಗದಲ್ಲಿದ್ದು, ನೂರಾರು ಚಿತ್ರಗಳಲ್ಲಿ ನಟಿಸಿದರೂ ಆರ್ಥಿಕ ಸಮಸ್ಯೆ ಎದುರಿಸುತ್ತಾರೆ. ಕೆಲವರು ಇಂಡ್ ಸ್ಟ್ರಿಗೆ ಬಂದು ಕೆಲ ವರ್ಷಗಳಲ್ಲೇ ಕೋಟ್ಯಾಧಿಪತಿಗಳಾಗುತ್ತಾರೆ. ಇದೀಗ ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕಲಾವಿದರಲ್ಲಿ ಹರೀಶ್ ರಾಯ್ ಅಲಿಯಾಸ್ ಕೆಜಿಎಫ್ ಚಾಚಾ ಒಬ್ಬರು.

ಹೌದು ಹಿರಿಯ ನಟ ಹರೀಶ್ ರಾಯ್ ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ವಿಚಾರ ಅವರಿಗೆ ತಡವಾಗಿ ತಿಳಿದಿದೆ. ಕೆಜಿಎಫ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಗೊತ್ತಾಗಿದ್ದರೂ ಹೆಚ್ಚಿನ ಚಿಕಿತ್ಸೆ ಬಗ್ಗೆ ಯೋಚಿಸಿಲ್ಲ. ಕಾರಣ ಕುಟುಂಬದ ನಿರ್ವಹಣೆ. ಹೀಗಾಗಿ ಥೈರಾಯ್ಡ್ ಕ್ಯಾನ್ಸರ್ ಇದೀಗ ಕೊನೆಯ ಹಂತಕ್ಕೆ ಬಂದಿದೆ.

ಈ ವಿಚಾರವನ್ನು ಬೇರೆಯವರ ಎದುರು ಹೇಳಿದರೆ ಎಲ್ಲಿ ತಮಗೆ ಅವಕಾಶಗಳು ಸಿಗುವುದಿಲ್ಲವೋ ಎಂದುಕೊಂಡು ಸುಮ್ಮನಿದ್ದ ಪರಿಣಾಮ ತೀವ್ರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹಲವು ಸ್ಟಾರ್ ನಟರೊಂದಿಗೆ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರಗಳಲ್ಲಿ ಸಾಕಷ್ಟು ಮಿಂಚಿದ್ದಾರೆ. ಈಗಿನ ಹುಡುಗರಿಗೆ ನಟ ಹರೀಶ್ ರಾಯ್, ಕೆಜಿಎಫ್ ಚಿತ್ರದ ಚಾಚಾ ಮೂಲಕವೇ ಪರಿಚಯ. ಇಂತಹ ಚಾಚಾ ಸಂಕಷ್ಟದಲ್ಲಿ ಆರ್ಥಿಕ ನೆರವು ಕೇಳುತ್ತಿದ್ದಾರೆ. ಅವರ ಫೋನ್ ನಂಬರ್ ಸಹ 9606960656 ಕೊಟ್ಟಿದ್ದು, ಸಹಾಯ ಮಾಡುವವರು ಇದಕ್ಕೆ ಹಣ ಹಾಕಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!