ರಾಜ್ಯದ 12 ಜಿಲ್ಲೆಗಳು ಲಾಕ್ ಡೌನ್?

551

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದಲ್ಲಿ ಕರೋನಾ ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ರಿಂದಾಗಿ ಜುಲೈ 14ರ ರಾತ್ರಿ 8ಗಂಟೆಯಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಇದರ ಜೊತೆಗೆ ಇದೀಗ ಮತ್ತೆ 12 ಜಿಲ್ಲೆಗಳನ್ನ ಲಾಕ್ ಡೌನ್ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಕಲಬುರಗಿ, ಮಂಗಳೂರು, ಮೈಸೂರು, ಗದಗ, ಉಡುಪಿ, ಬೆಳಗಾವಿ, ಬೀದರ, ಧಾರವಾಡ, ವಿಜಯಪುರ, ರಾಯಚೂರು, ಯಾದಗಿರಿ ಸೇರಿದಂತೆ 12 ಜಿಲ್ಲೆಗಳನ್ನ ಮತ್ತೊಮ್ಮೆ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆಯಂತೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದು, ರಾಜ್ಯದ ಯಾವ ಯಾವ ಜಿಲ್ಲೆಗಳು ಲಾಕ್ ಡೌನ್ ಮಾಡಲಾಗುತ್ತೆ ಅನ್ನೋದು ನಾಳೆ ಘೋಷಣೆ ಮಾಡಬಹುದು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಸೋಂಕಿನ ಬಗ್ಗೆ ಜನರು ಜಾಗೃತಿಯಿಂದ ಇರದೆ ಹೋಗ್ತಿರುವ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗ್ತಿದೆ. ಸರ್ಕಾರ ಮಾಡುವ ಪ್ರಯತ್ನ ಮಾಡ್ತಿದೆ. ಆದ್ರೆ, ಸಾರ್ವಜನಿಕರು ತಮ್ಮ ಜೀವದ ಕಾಳಜಿ ತೋರಿಸದೆ, ಎಲ್ಲ ಮಾರ್ಗದರ್ಶಿ ನಿಯಮಗಳನ್ನ ಗಾಳಿಗೆ ತೂರಿ ನಡೆದುಕೊಳ್ತಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!