10.15ಕ್ಕೆ ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್

141

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಈಗಾಗ್ಲೇ ಬಜೆಟ್ ಅಧಿವೇಶನ ಶುರುವಾಗಿ ಒಂದು ವಾರ ಆಗಿದೆ. ಇಂದು ಮುಂಜಾನೆ 10.15ಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದ ಕೊನೆಯ ಬಜೆಟ್ ಮಂಡಿಸಲಿದೆ. ಹೀಗಾಗಿ ರಾಜ್ಯದ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಏಪ್ರಿಲ್, ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಹಾಲಿನ ದರ ಹೆಚ್ಚಳ ವಿಚಾರ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ವಿಚಾರ, ಕಾರ್ಮಿಕ ವಲಯ, ಶಿಕ್ಷಣ, ಉದ್ಯೋಗ, ವೈದ್ಯಕೀಯ ಸೇರಿದಂತೆ ಹಲವು ಮಹತ್ವದ ವಲಯಗಳ ಕುರಿತು ಏನು ಮಂಡಿಸಲಾಗುತ್ತೆ ಅನ್ನೋದು ತಿಳಿಯಲಿದೆ. ಹಿಂದೂಳಿದ ವಿವಿಧ ಸಮುದಾಯಗಳಿಗೆ ಗೃಹ ಸಾಲ, ನಿವೇಶನ, ನಿಗಮ ಮಂಡಳಿಗಳಿಗೆ ಅನುದಾನ, ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಳ, ಕುಲಕಸಬುದಾರರಿಗೆ ಪ್ರೋತ್ಸಾಹಧನ, ರೈತರಿಗೆ ನೀಡುವ ಶೂನ್ಯ ಬಡ್ಡಿದರ ಸಾಲ 3ರಿಂದ 5ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ.

ಹೀಗೆ ಸಾಕಷ್ಟು ವಲಯಗಳು ಬಜೆಟ್ ಮೇಲೆ ನಿರೀಕ್ಷೆ ಇಟ್ಟುಕೊಂಡಿವೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡಾದರೂ ಜನಪರ ಯೋಜನೆಗಳನ್ನು ಮಂಡಿಸಬಹುದು ಎನ್ನಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!