ನಕಲಿ ಚಿನ್ನ ಅಡವಿಟ್ಟು 42 ಲಕ್ಷ ರೂಪಾಯಿ ಸಾಲ: ಇಬ್ಬರ ಬಂಧನ

243

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ನಕಲಿ ಚಿನ್ನ ಅಡವಿಟ್ಟು ಬರೋಬ್ಬರಿ 42 ಲಕ್ಷ ರೂಪಾಯಿ ಸಾಲ ಪಡೆದು ಮೋಸ ಮಾಡಿದ್ದ ಇಬ್ಬರನ್ನ ಬಂಧಿಸಲಾಗಿದೆ. ಬಸವೇಶ್ವರ ನಗರದ ನಿವಾಸಿ ಕರಮಲ ಬಾಲ ರವೀಂದ್ರನಾಥ ಹಾಗೂ ಶಿವಕುಮಾರ ಬಂಧಿತರಾಗಿದ್ದಾರೆ.

ರಾಜಾಜಿನಗರದ ಫೆಡರಲ್ ಬ್ಯಾಂಕ್ ಶಾಖೆಯಲ್ಲಿ 1 ಕೆಜಿ ನಕಲಿ ಚಿನ್ನ ಅಡವಿಟ್ಟು 42 ಲಕ್ಷ ರೂಪಾಯಿ ಸಾಲ ಪಡೆದಿದ್ರು. ಆದ್ರೆ, ಬಡ್ಡಿ ಪಾವತಿಸಿರಲಿಲ್ಲ. ಈ ಬಗ್ಗೆ ಬ್ಯಾಂಕ್ ನಿಂದ ಹಲವು ಬಾರಿ ನೋಟಿಸ್ ನೀಡಿದ್ರೂ ಪ್ರತಿಕ್ರಿಯೆ ನೀಡಿರ್ಲಿಲ್ಲ. ಹೀಗಾಗಿ ಚಿನ್ನ ಹರಾಜು ಮಾಡಲು ಬ್ಯಾಂಕ್ ಅಧಿಕಾರಿಗಳು ಮುಂದಾದಾಗ ಅದು ನಕಲಿ ಚಿನ್ನ ಅನ್ನೋದು ತಿಳಿದಿದೆ. ಈ ಬಗ್ಗೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಇಬ್ಬರನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!