ಸುನಂದಾ ಪುಷ್ಕರ ಸಾವು ಪ್ರಕರಣ: ತರೂರ್ ಖುಲಾಸೆ

271

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣ ಸಂಬಂಧ ಬುಧವಾರ ತರೂರ್ ಅವರನ್ನ ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿದೆ. ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರು ವರ್ಚುವಲ್ ವಿಚಾರಣೆ ವೇಳೆ ಈ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶಶಿ ತರೂರ್, ಕಳೆದ 7 ವರ್ಷಗಳಿಂದ ನಾನು ಸಾಕಷ್ಟು ಚಿತ್ರಹಿಂಸೆ ಅನುಭವಿಸಿದ್ದೇನೆ. ಇದೀಗ ನನಗೆ ದೊಡ್ಡ ಪರಿಹಾರ ಸಿಕ್ಕಿದೆ. ನ್ಯಾಯಾಧೀಶರಿಗೆ ಕೃತಜ್ಞತೆಗಳು ಎಂದಿದ್ದಾರೆ.

ಜನವರಿ 17, 2014ರಲ್ಲಿ ದೆಹಲಿಯ ಐಷಾರಾಮಿ ಹೋಟೆಲ್ ನಲ್ಲಿ ಸುನಾಂದಾ ಪುಷ್ಕರ್ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ರು. ತರೂರ್ ಮನೆಯ ನವೀಕರಣ ಕೆಲಸ ನಡೆಯುತ್ತಿದ್ರು. ದಂಪತಿ ಹೋಟೆಲ್ ನಲ್ಲಿ ವಾಸವಾಗಿದ್ರು. ಈ ಘಟನೆ ಬಳಿಕ ಶಶಿ ತರೂರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದ್ರೆ, ಬಂಧನವಾಗಿರ್ಲಿಲ್ಲ. 2018ರಲ್ಲಿ ಜಾಮೀನು ಪಡೆದಿದ್ರು. ಈಗ ಅವರನ್ನ ಖುಲಾಸೆಗೊಳಿಸಲಾಗಿದೆ. ಸುನಂದಾ ಸಾವಿನ ರಹಸ್ಯ ಬಯಲಾಗಬೇಕಿದೆ.




Leave a Reply

Your email address will not be published. Required fields are marked *

error: Content is protected !!