ರಾಮ ಮಂದಿರ ಪೂರ್ತಿ ನಿರ್ಮಾಣವಾದಾಗ ನಾನು ಹೋಗುತ್ತೇನೆ

162

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿನ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದೆ. ಆದರೆ, ಇದರಲ್ಲಿ ಕಾಂಗ್ರೆಸ್ ನಾಯಕರು, ಶಂಕರಾಚಾರ್ಯರ ನಾಲ್ಕು ಪೀಠದ ಸ್ವಾಮೀಜಿಗಳು, ಇತರೆ ಸ್ವಾಮೀಜಿಗಳು ಸಹ ಭಾಗವಹಿಸುವುದಿಲ್ಲ ಎಂದಿದ್ದಾರೆ. ಅಪೂರ್ಣ ಹಾಗೂ ಹಿಂದೂ ಧಾರ್ಮಿಕ ಶಾಸ್ತ್ರದ ಪ್ರಕಾರ ನಡೆದ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ ಎಂದು ಶಂಕರಾಚಾರ್ಯ ಪೀಠದ ಶ್ರೀಗಳು ಹೇಳಿದ್ದಾರೆ.

ಧಾರ್ಮಿಕ ಕಾರ್ಯಕ್ರಮವನ್ನು ಬಿಜೆಪಿ, ಆರ್ ಎಸ್ಎಸ್ ಕಾರ್ಯಕ್ರಮ ಮಾಡಲಾಗಿದೆ. ಇದರಲ್ಲಿ ರಾಜಕೀಯ ಬೆರಸಲಾಗಿದೆ ಎಂದು ಸಹ ದೂರಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಭಾಗವಹಿಸಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್, ಅಪೂರ್ಣ ರಾಮ ಮಂದಿರ ಉದ್ಘಾಟನೆ ನಾನು ಹೋಗುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಮೇಲೆ ಮಂದಿರ ಪೂರ್ತಿ ನಿರ್ಮಾಣವಾಗಲಿ ನಾನು ಹೋಗುತ್ತೇನೆ ಎಂದಿದ್ದಾರೆ.

ನಮ್ಮ ಪಕ್ಷವು ಅನೇಕ ನಂಬಿಕೆಗಳನ್ನು ಹೊಂದಿದ ಸದಸ್ಯರನ್ನು ಒಳಗೊಂಡಿದೆ. ಪಕ್ಷದಲ್ಲಿರುವ ಹಿಂದೂಗಳೆಲ್ಲ ರಾಮ ಲಲ್ಲಾಗೆ ಪ್ರಾರ್ಥನೆ ಸಲ್ಲಿಸುವ ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಇದು ರಾಜಕೀಯ ಆಯ್ಕೆ ಆಗದೆ. ವೈಯಕ್ತಿಕ ಆಯ್ಕೆಯಾಗಿದೆ. ಆಡಳಿತ ಪಕ್ಷದ ಅನುಕೂಲಕ್ಕಾಗಿ ಅಪೂರ್ಣ ಮಂದಿರ ಉದ್ಘಾಟನೆ ನಡೆಯುತ್ತಿದೆ. ಹೀಗಾಗಿ ನಾವು ಭಾಗವಹಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!