‘ಸಿಂದಗಿ ತಾಲೂಕಿನ 49,823 ರೈತರಿಗೆ ಶೀಘ್ರದಲ್ಲಿ ಬರ ಪರಿಹಾರ’

148

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರಾಜ್ಯದ ವಿವಿಧ ತಾಲೂಕುಗಳಲ್ಲಿ ಮಳೆ ಕೊರತೆಯಿಂದಾಗಿ ಬರಗಾಲ ಬಿದ್ದಿದೆ. ಅದರಲ್ಲಿ ಸಿಂದಗಿ ತಾಲೂಕು ಒಂದಾಗಿದೆ. ತಾಲೂಕಿನಲ್ಲಿ ಈಗಾಗ್ಲೇ 49,823 ರೈತರು ಬರ ಪರಿಹಾರಕ್ಕಾಗಿ ನೋಂದಾಯಿಸಿಕೊಂಡಿದ್ದು, ಶೀಘ್ರದಲ್ಲಿ ಅವರಿಗೆಲ್ಲ ಸರ್ಕಾರದಿಂದ ಪರಿಹಾರ ಬರುತ್ತೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.

75ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಸಮರ್ಥವಾಗಿ ಕೆಲಸ ಮಾಡಿದಾಗ ಎಲ್ಲ ಕ್ಷೇತ್ರದ ಅಭಿವೃದ್ಧಿಯಾಗುತ್ತೆ. ಅಟಲಜೀ ಜನಸ್ನೇಹಿ ಕೇಂದ್ರದ 44 ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ನಮ್ಮ ಜಿಲ್ಲೆಯ 13 ತಾಲೂಕುಗಳಲ್ಲಿ ಸಿಂದಗಿ ಪ್ರಥಮ ಸ್ಥಾನದಲ್ಲಿದೆ. ಹೋಬಳಿ ಮಟ್ಟದಲ್ಲಿ 3ನೇ ಸ್ಥಾನದಲ್ಲಿದೆ. ತಾಲೂಕು ಕಂದಾಯ ನ್ಯಾಯಾಲಯದಲ್ಲಿ 2, 5 ವರ್ಷದ ಪ್ರಕರಣಗಳನ್ನೆಲ್ಲ ಇತ್ಯರ್ಥ ಮಾಡಲಾಗಿದೆ. 6 ತಿಂಗಳಿಗಿಂತ ಮೇಲಿನ ಯಾವ ಪ್ರಕರಣಗಳು ಇಲ್ಲ. 1 ಪೈಕಿ ಪಾಣಿ ಪ್ರಕರಣ ತಾಂತ್ರಿಕ ಕಾರಣದಿಂದ ಬಾಕಿ ಉಳಿದಿದೆ ಎಂದರು.

ಈ ವೇಳೆ ಸಿಪಿಐ ಡಿ.ಹುಲುಗಪ್ಪ, ತಾಲೂಕು ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಂ ಯಳಮೇಲಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಸಹಾಯಕ ಕೃಷಿ ನಿರ್ದೇಶಕ ಎಚ್.ವೈ ಸಿಂಗೆಗೊಳ ವೇದಿಕೆಯಲ್ಲಿದ್ದರು. ಪಿಎಸ್ಐ ಭೀಮಣ್ಣ ರಬಕವಿ, ಅಪರಾಧ ವಿಭಾಗದ ಪಿಎಸ್ಐ ಅಂಗಡಿ, ಅಬಕಾರಿ ವೃತ್ತ ನಿರೀಕ್ಷಕಿ ಆರತಿ ಖೈನೂರ, ಅಗ್ನಿ ಶಾಮಕ ದಳದ ಅಧಿಕಾರಿಗಳು ಸೇರಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ತಾಲೂಕು ಪಂಚಾಯ್ತಿ ಇಒ ರಾಮು ಅಗ್ನಿ ಸ್ವಾಗತಿಸಿದರು. ಆರ್.ಡಿ ಪಾಟೀಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ನಿರೂಪಿಸಿದರು. ಈ ವೇಳೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.




Leave a Reply

Your email address will not be published. Required fields are marked *

error: Content is protected !!