ಡಾ.ತಿಪ್ಪೇಕಾಳಿ ರಂಗನಾಥ್ ಗೆ ಕರುನಾಡ ರತ್ನ ಪ್ರಶಸ್ತಿ

575

ಪ್ರಜಾಸ್ತ್ರ ಸುದ್ದಿ

ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ನೀಡುವ ಕರುನಾಡ ರತ್ನ ಪ್ರಶಸ್ತಿಗೆ ಸ್ವಚ್ಛತಾ ಅಭಿಯಾನದ ರೂವಾರಿ, ಸಮಾಜ ಸೇವಕ ಡಾ.ತಪ್ಪೇಕಾಳಿ ರಂಗನಾಥ್ ಆಯ್ಕೆ ಆಗಿದ್ದಾರೆ. ಡಿಸೆಂಬರ್ 25ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ಅಧ್ಯಕ್ಷೆ ಯಮುನಾ ಹೆಚ್.ಎಲ್ ತಿಳಿಸಿದ್ದಾರೆ.

ಡಾ.ತಿಪ್ಪೇಕಾಳಿ ರಂಗನಾಥ್ ಪರಿಚಯ

ಡಾ.ತಿಪ್ಪೇಕಾಳಿ ರಂಗನಾಥ್ ಅವರು ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದವರಾಗಿದ್ದು, ಕಳೆದ 22 ವರ್ಷಗಳಿಂದ ತಲಕಾಡು ಹಾಗೂ ಮೈಸೂರಿನ ಸುತ್ತಮುತ್ತ “ಸ್ವಚ್ಛತಾ ಅಭಿಯಾನ” ಕಾರ್ಯಕ್ರಮವನ್ನು ಮಾಡುತ್ತಾ ಜನರಲ್ಲಿ ಸೃಚ್ಛತಾ ಅರಿವನ್ನು ಮೂಡಿಸುತ್ತಿದ್ದಾರೆ.

ಇವರ ಸೇವೆಗೆ “ಗೌರವ ಡಾಕ್ಟರೇಟ್” ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆಯಿಂದ “ರಾಜ್ಯ ಪ್ರಶಸ್ತಿ” ಲಭಿಸಿದೆ. ಇದಲ್ಲದೇ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಮುಡಿಗೇರಿವೆ. ಇವರು ತಲಕಾಡಿನಲ್ಲಿ 4 ಭಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿ ಒಂದು ಬಾರಿ ಉಪಾಧ್ಯಕ್ಷರಾಗಿದ್ದಾರೆ.

ದೂರದರ್ಶನದ ಚಂದನ ವಾಹಿನಿ ಹಾಗೂ ರಾಷ್ಟ್ರೀಯ ಸುದ್ಧಿವಾಹಿನಿಯಲ್ಲಿ, ಇವರ “ಸ್ವಚ್ಛತಾ ಆಂದೋಲನದ” ಬಗ್ಗೆ ಸುದ್ದಿ ಪ್ರಕಟಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಇವರು ದಲಿತ ಹಾಗೂ ಹಿಂದುಳಿದ ಕಾಲೋನಿಗಳಿಗೆ ಹೋಗಿ ಇವರೇ ಸೃತಃ ಮೇರಿಗಳನ್ನು ಸ್ವಚ್ಚಗೊಳಿಸಿ, ಜನರಲ್ಲಿ ಅರಿವನ್ನು ಮಾಡಿಸುತ್ತಿದ್ದಾರೆ. ಇಂತಹ ವಿಶೇಷ ಸಾಧಕನಿಗೆ 2021ನೇ ಸಾಲಿನ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!