ಬ್ರೇಕಿಂಗ್ ನ್ಯೂಸ್
Search

ಹುಡುಗಿ ಹೆಸರಲ್ಲಿ ಮೋಸ ಮಾಡುತ್ತಿದ್ದವನ ಬಂಧನ

117

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸೋಷಿಯಲ್ ಮೀಡಿಯಾದ ಪ್ರೊಫೈಲ್ ಫೋಟೋಗಳನ್ನು ನಂಬಿ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗ್ತಾನೆ ಇಲ್ಲ. ಹೀಗಾಗಿ ಹುಡುಗಿಯರ ಹೆಸರಿನಲ್ಲಿ ಹಣ ಪೀಕುವ ಮೋಸಗಾರರು ಹೆಚ್ಚಾಗುತ್ತಿದ್ದಾರೆ. ಹುಡುಗಿಯರ ಹೆಸರಿನಲ್ಲಿ ಬ್ಲ್ಯಾಕ್ ಮಾಡಿದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

ಬೊಮ್ಮನಹಳ್ಳಿ ಹತ್ತಿರದ ಎನ್.ಆರ್ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಹರಿ ಅಲಿಯಾಸ್ ನರಹರಿ ಬಂಧಿತ ಆರೋಪಿಯಾಗಿದ್ದಾನೆ. ಲಾಡ್ಜ್ ಗೆ ಬರುತ್ತಿದ್ದ ವ್ಯಕ್ತಿಗಳ ನಂಬರ್ ಪಡೆಯುತ್ತಿದ್ದ. ನಂತರ ಹುಡುಗಿಯರ ರೀತಿಯಲ್ಲಿ ಮೆಸೇಜ್ ಮಾಡುತ್ತಿದ್ದ. ನಂತರ ಖಾಸಗಿ ಫೋಟೋಗಳನ್ನು ಹಂಚಿಕೊಳ್ಳಲು ಹೇಳುತ್ತಿದ್ದ.

ಅನಿತಾ ಎನ್ನುವ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ ಆರೋಪಿ, ಫೋಟೋ, ಚಾಟ್ ಸ್ಕ್ರೀನ್ ಶಾಟ್ ಇಟ್ಟುಕೊಂಡು ಬ್ಲ್ಯಾಕ್ ಮಾಡುತ್ತಿದ್ದ. ಇಂತಹದ್ದೆ ಪ್ರಕರಣದಲ್ಲಿ ಇದೀಗ ಸಕ್ಕಿಬಿದ್ದಿದ್ದಾನೆ. ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ 1 ಲಕ್ಷ ರೂಪಾಯಿ ಪಡೆದಿದ್ದಾನೆ. ಇದೀಗ ಉತ್ತರ ವಿಭಾಗದ ಪೊಲೀಸರು ನರಹರಿಯನ್ನು ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!