ಹಡಪದ ಅಪ್ಪಣ್ಣ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

398

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ನಡೆದ ಶರಣ ಹಡಪದ ಅಪ್ಪಣನವರ ಜಯಂತಿ ಹಾಗೂ ಹಡಪದ ಅಪ್ಪಣ್ಣ ಪ್ರಾಥಮಿಕ ಶಾಲೆಯ 14ನೇ ವಾರ್ಷಿಕೋತ್ಸವವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎನ್ನುವುದು ಹುಲಿಯ ಹಾಲಿದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ. ಅದರಂತೆ ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿ ಮಾಡಿ ಎಂದರು. ಹಡಪದ ಸಮಾಜ ಅತಿ ಹಿಂದೂಳಿದ ವರ್ಗವಾಗಿದ್ದರೂ ಪ್ರಾಥಮಿಕ ಶಾಲೆ ಪ್ರಾರಂಭಿಸಿ ಎಲ್ಲರಿಗೂ ವಿದ್ಯಾದಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಶಾಲೆಯ ಮೂಲಭೂತ ಸೌಲಭ್ಯಕ್ಕೆ 3 ಲಕ್ಷ ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗುರುಪಾದ ಹಡಪದ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ರಾಠೋಡ, ಸಿಂದಗಿ ತಾಲೂಕು ಹಡಪದ ಸಮಾಜದ ಅಧ್ಯಕ್ಷ ಮಾಂತೇಶ ಮೂಲಿಮನಿ, ಶರಣಯ್ಯ ಹಿರೇಮಠ, ಸಂತೋಷಗೌಡ ಪಾಟೀಲ(ಡಂಬಳ), ಸಂಜೀವ ಶಿವಣಗಿ, ಮಲ್ಲಿಕಾರ್ಜುನ ಸಾವಳಸಂಗ ಹಾಗೂ ಶಾಲೆಯ ಶಿಕ್ಷಕರು, ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!