ಮಹಿಳಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ

353

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಮಾತೋಶ್ರೀ ಮಹಿಳಾ ವಿವಿದೊದ್ದೇಶ ಸಹಕಾರಿ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದೆ ವೇಳೆ ಮಹಾದೇವಿ ಹಿರೇಮಠ ಅವರ ಸ್ಮರಣೆ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಂತಾ ಬಿರಾದಾರ, ಹೆಣ್ಣು, ಗಂಡು ಅನ್ನೋ ಬೇಧವಿಲ್ಲ. ಇಬ್ಬರು ಒಂದೇ ನಾಣ್ಯದ ಎರಡು ಮುಖವಿದಂತೆ. ಮೊಲೆ ಮೂಡಿ ಬಂದರೆ ಹೆಣ್ಣಂಬರು, ಮೀಸೆ ಮೂಡಿ ಬಂದರೆ ಗಂಡೆಂಬರ ಎಂದು ಅಕ್ಕಮಹಾದೇವಿ ಅಂದೆ ಹೇಳಿದ್ದಾರೆ. ಹೀಗಾಗಿ ಇಲ್ಲಿ ತಾರತಮ್ಯ ಬೇಡ. ಸಾಧನೆ ಮುಖ್ಯ ಎಂದರು.

ಬ್ಯಾಂಕ್ ಅಧ್ಯಕ್ಷೆ ಶೈಲಜಾ ಸ್ಥಾವರಮಠ ಮಾತನಾಡಿ, ಹೆಣ್ಣು ಕುಟುಂಬದ ಅಸ್ತಿತ್ವ. ಸಶಕ್ತ ಸಮಾಜದ ಆಧಾರ. ರಾಷ್ಟ್ರದ ಅಡಿಪಾಯ. ಹೀಗಾಗಿ ನಮ್ಮ ಗುರಿ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ಅಂತಾ ತಿಳಿಸಿದರು. ಸ್ಮರಣೆ ಕೃತಿ ಲೇಖಕ ಮಹಾದೇವಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಮನಗೂಳಿ ಆರ್ಯವೇದ ಕಾಲೇಜು ವ್ಯವಸ್ಥಾಪಕಿ ಶೀಲಾ ಕಲಬುರ್ಗಿ, ಮೋರಟಗಿ ವಿಜಯ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲಾ ಮಂದೇವಾಲಿ,  ಶಿಕ್ಷಕಿ ರಾಜೇಶ್ವರಿ ಪಾಟೀಲ, ಅನ್ನಪೂರ್ಣ ಹೋಟಗಾರ ಅತಿಥಿಗಳಾಗಿ ಭಾಗವಹಿಸಿದ್ದರುನಿರ್ದೇಶಕಿ ಉಮಾ ಅಲ್ಲಾಪೂರ ಪ್ರಾರ್ಥಿಸಿದರು. ಬ್ಯಾಂಕ್ ನಿರ್ದೇಶಕರಾದ ಗಂಗು ಕುರನಳ್ಳಿ, ಭಾರತಿ ಚೌಧರಿ, ಅಕ್ಕಮ್ಮ ಪಡೆಕನೂರ ಸೇರಿ ಇತರರು ಹಾಜರಿದ್ದರು.

ಬ್ಯಾಂಕ್ ಉಪಾಧ್ಯಕ್ಷೆ ವಿಮಲಾ ಪಾಸೋಡಿ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದರು. ಬ್ಯಾಂಕ್ ವ್ಯವಸ್ಥಾಪಕಿ ಚನ್ನಮ್ಮ ಬಗಲಿ ನಿರೂಪಿಸಿದರು. ನೀಲಮ್ಮ ಅಗಸರ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!