ಗ್ರಾಮೀಣ ಮಹಿಳೆಯರ ಮೇಲೆ ಇಂದಿಗೂ ಶೋಷಣೆ: ಡಾ.ಜಿ.ಎಂ ಯಾಡಗಿ

448

ಪ್ರಜಾಸ್ತ್ರ ಸುದ್ದಿ

ಸಿಂದಗಿ: ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಮುಂದೆಬರುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದ ಮಹಿಳೆಯರು ಇನ್ನು ಶೋಷಣೆಗೆ ಒಳಗಾಗುತ್ತಿದ್ದಾರೆ. ಅವರ ನೆರವಿಗೆ ನಾವೆಲ್ಲ ಬರಬೇಕಾಗಿದೆ ಎಂದು ಡಾ.ಜಿ.ಎಂ ಯಾಡಗಿ ಹೇಳಿದರು. ಭಾರತೀಯ ಜೀವ ವಿಮಾ ನಿಗದ ದೂರಸಂಪರ್ಕ ಶಾಖೆಯಲ್ಲಿ ಮಹಿಳೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ವಿವಿಧ ರಂಗಗಳಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಇವರ ಪಾತ್ರ ಅಪಾರ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿಯೂ ತೊಡಗಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ ಎಂದರು. ಪುರಾಣ ಕಾಲದಿಂದಲೂ ದೇಶದಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುತ್ತಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣು ಮಹಿಳೆಯರಿಗೆ ನೀಡಿದ ಗೌರವ ಜಗತ್ತಿನಲ್ಲಿಯೇ ವಿಶಿಷ್ಟವಾಗಿದೆ ಅಂತಾ ಆನಂದಬಾಯಿ ನಾರಾಯಣಕರ ಹೇಳಿದರು.

ಪ್ರಾಸ್ತಾವಿಕವಾಗಿ ಆಡಳಿತಾಧಿಕಾರಿ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿದರು. ಈ ವೇಳೆ ಪಿ.ವಿ ಯಾರವ, ಜಯಶ್ರೀ ಪರತನಹಳ್ಳಿ, ಸಾವಿತ್ರಿ ಕಪಾಲಿ, ಉಮಾದೇವಿ ಧೂಪ, ಸರೋಜಾ ವಾಲೀಕಾರ, ಡಿ.ಎಂ.ಮುಲ್ಲಾ, ಪಾರ್ವತಿ ಸಾತಿಹಾಳ, ಬಸಮ್ಮ ಕೌದಿ, ವಿಜಯಲಕ್ಷ್ಮಿ ಹೂಗಾರ, ಅಧಿಕಾರಿಗಳಾದ ಪಿ.ರಾಹುಲ್, ಬಸವರಾಜ್ ಹವಾಲ್ದಾರ್, ಎಂ.ಬಿ ಶೇರಖಾನೆ, ದಯಾನಂದ, ಶಿವಾನಂದ ಹುಣಸಗಿ, ವಿಜಯಕುಮಾರ ಅಳ್ಳೊಳ್ಳಿ ಸೇರಿ ಅನೇಕರಿದ್ದರು.




Leave a Reply

Your email address will not be published. Required fields are marked *

error: Content is protected !!