ಆನ್ಲೈನ್ ಮೂಲಕ ಜನನ-ಮರಣ ಪ್ರಮಾಣ ಪತ್ರ

251

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಜನನ ಹಾಗೂ ಮರಣ ಪ್ರಮಾಣ ಪತ್ರ ಬಡೆಯಲು ಇಂದಿಗೂ ಸಹ ಸಂಬಂಧಪಟ್ಟ ಇಲಾಖೆಗೆ ಅಲೆಯುವುದು ತಪ್ಪಿಲ್ಲ. ಐದು ನಿಮಿಷದ ಕೆಲಸಕ್ಕೆ ದಿನಪೂರ್ತಿ ಇಲ್ಲವೆ ಎರಡ್ಮೂರು ದಿನ ಅಲೆದಾಡಿಸುತ್ತಾರೆ. ಇನ್ಮುಂದೆ ಹೀಗೆ ಆಗದಂತೆ ಮಾಡಲು ಆನ್ಲೈನ್ ವ್ಯವಸ್ಥೆ ಮಾಡಲಾಗ್ತಿದೆ.

ಮಗು ಹುಟ್ಟಿದ ಬಳಿಕ ಆಸ್ಪತ್ರೆಯಲ್ಲಿ ನೀಡುವ ದಾಖಲಾತಿಯನ್ನ ಸ್ಥಳೀಯ ಸಂಸ್ಥೆಯಲ್ಲಿ ನೀಡಬೇಕು. ಅಲ್ಲಿನ ಅಧಿಕಾರಿಗಳು ಇ ಜನ್ಮ ಪೋರ್ಟಲ್ ನಲ್ಲಿ ತಂದೆ ತಾಯಿ ಹೆಸರು, ಆಧಾರ್, ಪಾನ್ ಕಾರ್ಡ್ ಸೇರಿದಂತೆ ಯಾವುದಾದರೂಂದು ದಾಖಲೆ ಮೂಲ ಅಪ್ಲೋಡ್ ಮಾಡುತ್ತಾರೆ.

ಹೀಗೆ ಅಪ್ಲೋಡ್ ಆದ್ಮೇಲೆ ಜನರೇಟ್ ಆದ ನಂಬರ್ ಬರುತ್ತೆ. ಆ ನಂಬರ್ ಮೂಲಕ ಜನನ ಹಾಗೂ ಮರಣದ ಪ್ರಮಾಣ ಪತ್ರವನ್ನ ಎಲ್ಲಿ ಬೇಕಾದರೂ ಪಡೆದುಕೊಳ್ಳಬಹುದು. ಈ ಯೋಜನೆ ಸೆಪ್ಟೆಂಬರ್ ನಿಂದ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!