ಕೇರಳ ಗಡಿ ಓಪನ್: ಇವರಿಗೆ ಮಾತ್ರ ಅವಕಾಶ

609

ಬೆಂಗಳೂರು: ಕರೋನಾ ಮಹಾಮಾರಿ ಎಲ್ಲೆಡೆ ವ್ಯಾಪಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಗಡಿಗಳನ್ನ ಬಂದ್ ಮಾಡಲಾಗಿದೆ. ಹೀಗಾಗಿ ನೆರೆಯ ಕೇರಳ, ಮಹಾರಾಷ್ಟ್ರ, ಗೋವಾ, ಆಂಧ್ರ, ತಮಿಳುನಾಡಿಗೆ ಹೋಗುವವರಿಗೆ ಮತ್ತು ಬರುವವರಿಗೆ ನಿರ್ಬಂಧ ಹೇರಲಾಗಿದೆ.

ಇನ್ನು ಕೇರಳದಲ್ಲಿ ಕರೋನಾ ಭರ್ಜರಿಯಾಗಿದೆ. ಹೀಗಾಗಿ ಕರ್ನಾಟಕ-ಕೇರಳ ಗಡಿಗಳನ್ನ ಬಂದ್ ಮಾಡಲಾಗಿದೆ. ಇದನ್ನ ಯಾವುದೇ ಕಾರಣಕ್ಕೂ ಓಪನ್ ಮಾಡುವುದಿಲ್ಲವೆಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ರು. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಿಎಂಗೆ ಪತ್ರ ಬರೆದಿದ್ರು. ಪ್ರಧಾನಿ ಎಂಟ್ರಿ ಆಗಬೇಕೆಂದು ಕೇಳಿಕೊಂಡಿದ್ರು. ಆದ್ರೆ, ಸಿಎಂ ಡೋಂಟ್ ಕೇರ್ ಅಂದಿದ್ರು.

ಇದರ ನಡುವೆ ಕೇರಳ ಸಿಎಂ ಪಿಣರಾಯ್ ವಿಜಿಯನ್ ಅವರು ಕೇರಳ ಗಡಿ ತೆಗೆಯಲು ಕರ್ನಾಟಕ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಆದ್ರೆ, ಕರೋನಾ ಸೋಂಕಿತರಲ್ಲದ ಇತರೆ ರೋಗಿಗಳನ್ನ ಮಂಗಳೂರಿಗೆ ಹೋಗಲು ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಕರ್ನಾಟಕದ ವೈದ್ಯರ ಟೀಂ ತಲಪಾಡಿ ಗಡಿಯ ಚೆಕ್ ಪೋಸ್ಟ್ ನಲ್ಲಿದ್ದು, ಕರೋನಾ ಸೋಂಕಿತರಲ್ಲದ ಇತರೆ ರೋಗಿಗಳು ಕುರಿತು ತಪಾಸಣೆ ನಡೆಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!