ಸಿಂದಗಿಯಲ್ಲಿ ರೈತ ಸಂಘ-ಹಸಿರು ಸೇನೆ ಪ್ರತಿಭೆಟನೆ

399

ಸಿಂದಗಿ: ಪ್ರಾಮಾಣಿಕ ಅಧಿಕಾರಿಗಳನ್ನ ವರ್ಗಾವಣೆ ಮಾಡ್ತಿರುವುದನ್ನ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯ್ತು.

ತಾಲೂಕಿನ ಯಂಕಂಚಿ ಹಾಗೂ ವಲಯದ ಪ್ರಾಮಾಣಿಕ ಗ್ರಾಮ ಲೆಕ್ಕಾಧಿಕಾರಿಗಳನ್ನ ವರ್ಗಾವಣೆ ಮಾಡಿ, ಭ್ರಷ್ಟರನ್ನ ಉಳಿಸಿಕೊಳ್ಳುವ ಕೆಲಸ ಮಾಡಲಾಗ್ತಿದೆ ಅಂತಾ ರೈತ ಮುಖಂಡರು ಆರೋಪಿಸಿದ್ರು. ಪ್ರಾಮಾಣಿಕ ಸದರಿ ಅಧಿಕಾರಿಗಳನ್ನ ನೇಮಿಸಿಕೊಳ್ಳಬೇಕೆಂದು ಒತ್ತಾಯಿಸಿದ್ರು.  ಇದರ ಜೊತೆಗೆ ತೋಟಗಾರಿಕೆ, ಕೃಷಿ ಹಾಗೂ ಕಂದಾಯ ಇಲಾಖೆಗಳಲ್ಲಿಯೂ ಭ್ರಷ್ಟ ಅಧಿಕಾರಿಗಳನ್ನ ಮುಂದುವರೆಸಿಕೊಂಡು ಹೋಗಲಾಗ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಯ್ತು.

ತಹಶೀಲ್ದಾರ್ ಬಿ.ಎಸ್ ಕಡಕಬಾವಿ ಅವರ ಮೂಲಕ ಮುಖ್ಯಮಂತ್ರಿಗೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿದ್ರು. ಈ ವೇಳೆ ಶಿವಲಿಂಗಗೌಡ ಬಿರಾದಾರ, ಶಿವಪ್ಪ ಸುಲ್ಫಿ, ಸೋಮಶೇಖರ ನಂದಿ, ಸಿದ್ದು ಪೂಜಾರಿ, ಮಲ್ಲಪ್ಪ ಬಮ್ಮನಳ್ಳಿ, ಸಂಗಮೇಶ ಚಿಗರಿ, ಬಲಭೀಮ ಪಾರಸನಳ್ಳಿ, ಪ್ರಕಾಶ ಕೋಳಕೂರ, ರಾಜು ಕಲಾಲ ಸೇರಿದಂತೆ ಖೈನೂರು, ಮುರಡಿ, ಯಂಕಂಚಿ ಗ್ರಾಮದ ರೈತರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!