ಮಹಾಮಳೆಗೆ ಕೇರಳ ಕಕ್ಕಾಬಿಕ್ಕಿ.. ಕರ್ನಾಟಕದ ಕಥೆ ಏನು?

221

ಪ್ರಜಾಸ್ತ್ರ ಸುದ್ದಿ

ಕೊಚ್ಚಿ: ನೆರೆಯ ರಾಜ್ಯ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಇದರಿಂದಾಗಿ ಇಡೀ ರಾಜ್ಯ ಅಪಾರ ಪ್ರಮಾಣದಲ್ಲಿ ಹಾನಿ ಅನುಭವಿಸುತ್ತಿದೆ. ಕೋವಿಡ್ 19 ಹಾವಳಿಯ ಬಳಿಕ ಮಳೆಯ ಕಾಟ ಶುರುವಾಗಿದೆ. ಇದವರೆಗೂ 9 ಮಕ್ಕಳು ಸೇರಿದಂತೆ 24 ಜನರು ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.

ಕೋಟ್ಟಯಂ ಮತ್ತು ಇಡಕ್ಕಿ ಜಿಲ್ಲೆಗಳಲ್ಲಿ ಮಳೆಮಹಾ ಸ್ಫೋಟವಾಗಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಇನ್ನು ಕೇರಳ-ಕರ್ನಾಟಕದ ಲಕ್ಷದೀಪ ಕರಾವಳಿ ಭಾಗದಲ್ಲಿ ಹೆಚ್ಚಿನ ಅಲೆಗಳು ಉಂಟಾಗಲಿದ್ದು, ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಕೇರಳದ ಮಳೆಯ ಆರ್ಭಟ ಕರ್ನಾಟಕದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಅನ್ನೋ ಆತಂಕ ಶುರುವಾಗಿದೆ. ಸಿಲಿಕಾನ್ ಸಿಟಿಯ ಜನರಿಗೆ ಈಗ್ಲೇ ಭಯ ಶುರುವಾಗಿದೆ. ಈಗಾಗ್ಲೇ ಮಳೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಜನತೆಗೆ ನೆರೆಯ ರಾಜ್ಯದ ಮಳೆ ಎಫೆಕ್ಟ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅದರ ಪರಿಣಾಮ ಎಷ್ಟಿರುತ್ತೆ ಅನ್ನೋದೇ ಆತಂಕ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!