ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್ಐಆರ್

224

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಿತ್ರದುರ್ಗ: ಕೋಟಿಗೊಬ್ಬ-3 ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಿತರಕ ಖಾಜಾಪೀರ್ ಎಂಬುವರ ನಗರ ಪೊಲೀಸ್ ಠಾಣೆಯಲ್ಲಿ ಜೀವಬೆದರಿಕೆ(506) ಹಾಗೂ ಉದ್ದೇಶಪೂರ್ವಕ ಅವಮಾನ(504) ದೂರು ದಾಖಲಿಸಿದ್ದಾರೆ.

ಕೋಟಿಗೊಬ್ಬ-3 ಚಿತ್ರದ ದಾವಣಗೆರೆ, ಚಿತ್ರದುರ್ಗದ ವಿತರಣೆಯ ಹಕ್ಕನ್ನು ಖಾಜಾಪೀರ್ ಹಾಗೂ ಕೆಲವರು ಪಡೆದಿದ್ದರು. ಇದಕ್ಕಾಗಿ 2.9 ಕೋಟಿ ರೂಪಾಯಿ ಒಪ್ಪಂದವಾಗಿದ್ದು, ಮುಂಗಡವಾಗಿ 60 ಲಕ್ಷ ರೂಪಾಯಿ ನೀಡಲಾಗಿದೆ. ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ಕೇಳಿದಾಗ ಬೇರೆಯವರಿಗೆ ವಿತರಣೆ ಹಕ್ಕು ನೀಡಲಾಗಿದೆ ಎಂದಿದ್ದಾರೆ. ಮುಂಗಡವಾಗಿ ನೀಡಿದ್ದ ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ್ದಾರೆ.

ದಿನಗಳ ಕಳೆದಂತೆ ಕೋಟಿಗೊಬ್ಬ-3 ಚಿತ್ರ ಒಂದಾದ ಮೇಲೆ ಒಂದು ವಿವಾದವಾಗುತ್ತಿದೆ. ಅಕ್ಟೋಬರ್ 14ಕ್ಕೆ ಬರಬೇಕಿದ್ದ ಸಿನಿಮಾ 15ಕ್ಕೆ ಬಂದಿತು. ಇದು ಒಂದು ರೀತಿ ವಿವಾದವಾಯಿತು. ಕೆಲ ವಿತರಕರ ವಿರುದ್ಧ ಗಂಭೀರ ಆರೋಪ ಮಾಡಿ ಕಾನೂನು ಸಮರಕ್ಕೆ ಮುಂದಾಗಿದ್ದರು. ಇದೀಗ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!