ಕೆಪಿಎಲ್ ಫಿಕ್ಸಿಂಗ್ ಹಗರಣ: ತನಿಖೆ ನಡೆಸದಂತೆ ಯಾರ ಒತ್ತಡವಿದೆ?

352

ಬೆಂಗಳೂರು: ಕೆಪಿಎಲ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧಿಸಲಾಗಿದೆ. ಹೀಗಾಗಿ ಪೊಲೀಸ್ರು ಭರ್ಜರಿಯಾಗಿ ತನಿಖೆ ನಡೆಸಿದ್ದಾರೆ. ಆದ್ರೆ, ಇದೀಗ ಪೊಲೀಸ್ರ ಮೇಲೆ ಒತ್ತಡ ತಂದು ತನಿಖೆ ಮುಂದುವರೆಸದಂತೆ ನೋಡಿಕೊಳ್ಳಲಾಗ್ತಿದೆ ಎಂದು, ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೇಳಿದ್ದಾರೆ.

ಆಟಗಾರರ ಭವಿಷ್ಯದ ದೃಷ್ಟಿಯಿಂದ ತನಿಖೆ ಮುಂದುವರೆಸದಂತೆ ಒತ್ತಡ ಹಾಕಲಾಗ್ತಿದೆ. ಆದ್ರೆ, ನಾವು ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡುತ್ತೇವೆ. ಇದರಲ್ಲಿ ಇನ್ನು ಕೆಲವರು ಸಿಕ್ಕಿಬೀಳುವ ಸಾಧ್ಯತೆಯಿದೆ ಅಂತಾ ಆಯುಕ್ತರು ಹೇಳಿದ್ದಾರೆ. ಈಗಾಗ್ಲೇ ಇಬ್ಬರನ್ನ ಬಂಧಿಸಲಾಗಿದೆ. ತನಿಖೆ ಮುಂದುವರೆಯುತ್ತೆ ಅಂತಾ ಹೇಳಿದ್ದಾರೆ.

ಆಯುಕ್ತರ ಈ ಮಾತು ಸಾಕಷ್ಟು ಕುತೂಹಲ ಮೂಡಿಸಿದೆ. ಫಿಕ್ಸಿಂಗ್ ಹಗರಣದ ತನಿಖೆಗೆ ಅಡ್ಡಗಾಲು ಹಾಕ್ತಿರುವವರು ಯಾರು? ಇದರ ಹಿಂದಿರುವ ಉದ್ದೇಶವೇನು? ಯಾವ ಕಾರಣಕ್ಕೆ ಪೊಲೀಸ್ರ ಮೇಲೆ ಒತ್ತಡ ಹೇರಲಾಗ್ತಿದೆ ಅನ್ನೋ ಹತ್ತು ಹಲವು ಅನುಮಾನಗಳು ಮೂಡಿವೆ.




Leave a Reply

Your email address will not be published. Required fields are marked *

error: Content is protected !!