ಪ್ರಜಾಸ್ತ್ರ ಸುದ್ದಿ
ಕೋಲ್ಕತ್ತಾ: ಬಿಜೆಪಿ ವಿರುದ್ಧ ಸದಾ ಕೆಂಡ ಕಾರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೋಮವಾರ, ಪುಟ್ಬಾಲ್ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಅದು ಸೀರೆಯುಟ್ಟು ಪುಟ್ಬಾಲ್ ಆಡಿರುವ ಫೋಟೋ ವೈರಲ್ ಆಗಿದೆ.
ಕೃಷ್ಣನಗರ ಎಂಪಿ ಕಪ್ ಟೂರ್ನಮೆಂಟ್ 2022ರ ಫೈನಲ್ ಪಂದ್ಯದಲ್ಲಿ ಸಂಸದೆ ಮೊಯಿತ್ರಾ ಭರ್ಜರಿಯಾಗಿ ಪುಟ್ಬಾಲ್ ಆಡಿದ್ದಾರೆ. ಇದನ್ನು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ನಾನು ಸೀರೆಯಲ್ಲೇ ಆಡುತ್ತೇನೆ ಎಂದಿದ್ದಾರೆ.