ಸಾರಿಗೆ ನೌಕರರು ಮತ್ತೆ ಹೋರಾಟಕ್ಕೆ ರೆಡಿ!

280

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಎರಡು ತಿಂಗಳ ಹಿಂದೆ ಸಾರಿಗೆ ನೌಕರರು ಬಸ್ ಬಂದ್ ಹೋರಾಟ ನಡೆಸಿದ್ರು. ರಾಜ್ಯದಲ್ಲಿ ಇದು ದೊಡ್ಡ ತಲೆನೋವಿಗೆ ಕಾರಣವಾಗಿತ್ತು. ಸರ್ಕಾರಿ ನೌಕರರೆಂದು ಪರಿಗಣಿಸದ ಹೊರತು, ಉಳಿದೆಲ್ಲ ಭರವಸೆ ಈಡೇರಿಸುವ ಮಾತ್ನಾಡಿದ ಸರ್ಕಾರ ಮರೆತಿದೆ ಎಂದು ಕಿಡಿ ಕಾರಲಾಗಿದೆ.

ಆರನೇ ವೇತನ ಆಯೋಗವನ್ನ ಸಾರಿಗೆ ನೌಕರರಿಗೆ ವಿಸ್ತರಣೆ ಮಾಡುವುದು, ಅವೈಜ್ಞಾನಿಕ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನ ಪರಿಹರಿಸಲಾಗುವುದು ಎಂದು ಸರ್ಕಾರ ಒಪ್ಪಿಕೊಂಡಿದ್ದು, 75 ದಿನಗಳು ಕಳೆದ್ರೂ ಕ್ರಮ ತೆಗೆದುಕೊಂಡಿಲ್ಲವೆಂದು ಮತ್ತೆ ಹೋರಾಟಕ್ಕೆ ಮುಂದಾಗ್ತಿದ್ದಾರೆ.

ಸಾರಿಗೆ ನೌಕರರ ಒಕ್ಕೂಟದ ಗಡುವು ಮಾರ್ಚ್ 15ಕ್ಕೆ ಮುಕ್ತಾಯವಾಗಲಿದೆ. ಅದರೊಳಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು. ಇಲ್ಲದೆ ಹೋದರೆ ಮುಂದಿನ ಹೋರಾಟದ ತೀರ್ಮಾನಿಸಲಾಗುವುದು ಎಂದು ಹೇಳಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!