ಲಚ್ಯಾಣ ಸೀಲ್ ಡೌನ್ ಪ್ರಕರಣ: ಪಿಡಿಒಗೆ ನೋಟಿಸ್

930

ಪ್ರಜಾಸ್ತ್ರ ಸುದ್ದಿ

ಪಿಡಿಒ ಸಂಜಯ ಪವಾರ

ಇಂಡಿ: ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಚಲ್ಯಾಣ ಗ್ರಾಮವನ್ನ ಇಂದು ಸಂಜೆ 7 ಗಂಟೆಯಿಂದ 6 ದಿನಗಳ ಕಾಲ ಸೀಲ್ ಡೌನ್ ಮಾಡಲಾಗ್ತಿದೆ ಎಂದು ನೋಟಿಸ್ ಹೊರಡಿಸಲಾಗಿತ್ತು. ಈ ಸಂಬಂಧ ಪಿಡಿಒಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಲಚ್ಯಾಣ ಗ್ರಾಮ ಪಂಚಾಯ್ತಿ ಪಿಡಿಓ ಸಂಜಯ ಪವಾರಗೆ, ಇಂಡಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಕೆಪಿಎಸ್ಆರ್ ನಿಯಮ 1957ರ ನಿಯಮದ ಪ್ರಕಾರ ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಅನ್ನೋದಕ್ಕೆ ಖುದ್ದಾಗಿ ಲಿಖಿತ ರೂಪದಲ್ಲಿ ಉತ್ತರಿಸಲು ಸೂಚಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!