ಲಾಲ್ ಸಿಂಗ್ ಛಡ್ಡಾ, ಶಭಾಷ್ ಮಿಥು ಚಿತ್ರದ ವಿರುದ್ಧ ದೂರು

143

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದೆಹಲಿ: ವಿಕಲಚೇತನರನ್ನು ಅವಮಾನ ಮಾಡಲಾಗಿದೆ ಎಂದು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಹಾಗೂ ತಾಪ್ಸಿ ನಟನೆಯ ಶಭಾಷ್ ಮಿಥು ಚಿತ್ರದ ವಿರುದ್ಧ ದೂರು ನೀಡಲಾಗಿದೆ. ವಿಕಲಚೇತನರ ಕಮಿಷನರ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗಿದೆ.

ಚಿತ್ರದಲ್ಲಿ ಅಂಗವಿಕಲರನ್ನು ಲಂಗಡಿ, ಲಂಗಡೆ ಪದವನ್ನು ಉದ್ದೇಶಪೂರ್ವಕವಾಗಿ ಬಳಸುವ ಮೂಲಕ ಅಂಗವಿಕಲರಿಗೆ ಅವಮಾನ ಮಾಡಲಾಗಿದೆ ಎಂದು, ವಿಕಲಾಂಗ ವೈದ್ಯರ ಸಹ ಸಂಸ್ಥಾಪಕ ಡಾ.ಸತೇಂದ್ ಸಿಂಗ್ ದೂರು ನೀಡಿದ್ದಾರೆ. ಈ ಸಂಬಂಧ ಎರಡು ಚಿತ್ರಗಳ ನಿರ್ದೇಶಕರಿಗೆ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಹಾಗೂ ಕೇಂದ್ರ ಮತ್ತು ಮಾಹಿತಿ ಪ್ರಸಾರ ಸಚಿವಾಲಯ ಅಭಿಪ್ರಾಯ ಕೇಳಿದೆ.




Leave a Reply

Your email address will not be published. Required fields are marked *

error: Content is protected !!