‘ಸಾರಿಗೆ’ ಬಿಕ್ಕಟ್ಟಿಗೆ ಸವದಿ ಕಾರಣನಾ? ಕೋಡಿಹಳ್ಳಿನಾ? ಸಾರ್ವಜನಿಕರ ನಷ್ಟವನ್ನ ಇವರಿಬ್ಬರು ನೀಡ್ತಾರಾ?

279

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸೋಮವಾರದಿಂದ ಬಸ್ ಶುರುವಾಗುತ್ತೆ ಅನ್ನೋ ಕೊನೆಯ ಕ್ಷಣದಲ್ಲಿ ಎಲ್ಲವೂ ಉಲ್ಟಾ ಆಗಿದೆ. ಖಾಸಗಿ ಬಸ್ ಸಂಘದ ರಾಜ್ಯಾಧ್ಯಕ್ಷ ಚಂದ್ರು ಸೇರಿದಂತೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಮುಷ್ಕರ ಮುಂದುವರೆಸುವುದಾಗಿ ಹೇಳಿದ್ದಾರೆ. ಹೀಗಾಗಿ ಸೋಮವಾರದಿಂದ ಬಸ್ ಸಂಚಾರ ಇರುವುದಿಲ್ಲ.

ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರ ಸಮಸ್ಯೆ ಇಷ್ಟೊಂದು ಜಟಿಲವಾಗುವಂತೆ ಮಾಡ್ತಿರುವುದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಎಂದು ಹೇಳಲಾಗ್ತಿದೆ. ಗುರುವಾರ ಸಂಜೆ ಸಾರಿಗೆ ನೌಕರರು ಮನವಿ ನೀಡಲು ಬಂದಾಗ ತೆಗೆದುಕೊಂಡಿದ್ರೆ ಇಷ್ಟೊಂದು ದೀರ್ಘಕ್ಕೆ ಹೋಗ್ತಿರ್ಲಿಲ್ಲ. ಅಲ್ದೇ, ಅವರ ಬೇಜಾವಾಬ್ದಾರಿ ತನದ ನಡುವಳಿಕೆ ಇಷ್ಟಕ್ಕೆಲ್ಲ ಕಾರಣ ಎನ್ನಲಾಗ್ತಿದೆ.

ಕೋಡಿಹಳ್ಳಿ ಚಂದ್ರಶೇಖರ

ಇನ್ನು ರೈತ ಮುಖಂಡರಾಗಿರುವ ಕೋಡಿಹಳ್ಳಿ ಚಂದ್ರಶೇಖರ, ಸಾರಿಗೆ ನೌಕರರಿಗೆ ಬೆಂಬಲ ನೀಡಿ ಪ್ರತಿಭಟನೆಯ ನಾಯಕತ್ವ ವಹಿಸಿಕೊಂಡಿದ್ದಾರೆ. ಇವರೆ ನೌಕರರ ಹಾದಿ ತಪ್ಪಿಸ್ತಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಕೋಡಿಹಳ್ಳಿ ವಿರುದ್ಧ ಸಚಿವರಾದ ಸವದಿ, ಆರ್.ಅಶೋಕ, ಬಿ.ಸಿ ಪಾಟೀಲ, ಶಾಸಕ ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಮುಖಂಡರು ಕಡಿ ಕಾರುತ್ತಿದ್ದಾರೆ.

ಕೋಡಿಹಳ್ಳಿ ಎಂಥಾ ರೈತ ನಾಯಕ, ಅವರು ಎಷ್ಟೊಂದು ಬಡವರು, ರೈತರಿಗಾಗಿ ಎಲ್ಲವನ್ನು ಕಳೆದುಕೊಂಡು ಗುಡಿಸಲಲ್ಲಿ ಇದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ ಹೇಳಿದ್ದಾರೆ. ಮತ್ತೊಂದಡೆ ರೇಣುಕಾಚಾರ್ಯ ಮಾತ್ನಾಡಿ, ಇವರ ರೈತ ಮುಖಂಡ ಎನಿಸಿಕೊಳ್ಳಲು ನಾಲಾಯಕ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಡೀ ಘಟನೆಯನ್ನ ನೋಡಿದ್ರೆ ಒಂದ್ಕಡೆ ಸರ್ಕಾರಿ ಸಾರಿಗೆ ನೌಕರರ ಮನವೊಲಿಸುವ ಕೆಲಸ ಮಾಡಿಲ್ಲ. ಅವರ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿಲ್ಲ ಹೀಗಾಗಿ ಸಂಧಾನ ವಿಫಲವಾಗಿದೆ. ಇತ್ತ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೈಜಾಕ್ ಮಾಡಿದ್ದಾರೆ ಎನ್ನಲಾಗ್ತಿದೆ. ರೈತ ಹೆಸರಿನಲ್ಲಿ ಹಸಿರು ಶಾಲು ಹಾಕಿಕೊಂಡು ಹಣ ಕೊಳ್ಳೆ ಹೊಡೆಯುವ ಕೆಲಸ ಮಾಡ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಸ್ತಿದ್ದು, ಸಾರ್ವಜನಿಕರು ಕೆಲಸಕ್ಕೆ ಹೋಗದೆ ಪರದಾಡ್ತಿದ್ದು ಅವರ ಆರ್ಥಿಕ ನಷ್ಟವನ್ನ ಈ ಇಬ್ಬರು ನಾಯಕರು ನೀಡ್ತಾರಾ ಎಂದು ಪ್ರಶ್ನಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!