ಸ್ಥಳೀಯ ಚುನಾವಣೆ: ‘ಕೈ’ ಹಿಡಿದ ಮತದಾರ.. ಮುದುಡಿದ ‘ಕಮಲ’

221

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 2ನೇ ಅಲೆಯ ನಡುವೆಯೂ ರಾಜ್ಯದಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್ ಗೆ ಜೈ ಎಂದಿದ್ದಾನೆ. ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ.

ರಾಮನಗರ: ನಗರಸಭೆಯ 31 ವಾರ್ಡ್ ಗಳಲ್ಲಿ 19 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 11 ಜೆಡಿಎಸ್ ಗೆದ್ದಿದೆ. 1 ಕಡೆ ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ ಬಿಜೆಪಿ ಖಾತೆ ತೆರೆದಿಲ್ಲ.

ಬೀದರ: ನಗರಸಭೆ 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 8, ಜೆಡಿಎಸ್ 7, ಎಐಎಂಐಎಂ 2 ಹಾಗೂ ಆಪ್ 1 ಸ್ಥಾನ ಗೆದ್ದಿದೆ. ಕೋರ್ಟ್ ಮೊರೆ ಹೋದ ಕಾರಣ ವಾರ್ಡ್ 26, 32ಕ್ಕೆ ಚುನಾವಣೆ ನಡೆದಿಲ್ಲ. ವಾರ್ಡ್ ನಂಬರ್ 28 ಅವಿರೋಧ ಆಯ್ಕೆ ಆಗಿದೆ.

ಭದ್ರಾವತಿ: ಇಲ್ಲಿನ ನಗರಸಭೆಗೆ ನಡೆದ ಚುನಾವಣೆಯಲ್ಲಿ 35 ವಾರ್ಡ್ ಗಳಲ್ಲಿ 18 ಕಾಂಗ್ರೆಸ್ ಗೆದ್ದಿದೆ. 4 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.

ಬೇಲೂರು: ಪುರಸಭೆಯ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. 25 ಕಡೆ ಕಾಂಗ್ರೆಸ್, 5 ಕಡೆ ಜೆಡಿಎಸ್, 1 ಕಡೆ ಬಿಜೆಪಿ ಗೆಲುವು ದಾಖಲಿಸಿದೆ.

ಚಿಕ್ಕಬಳ್ಳಾಪುರ: ಗುಡಿಬಂಡೆ ಪಟ್ಟಣ ಪಂಚಾಯ್ತಿಯ 11 ಸ್ಥಾನಗಳಲ್ಲಿ ಕಾಂಗ್ರೆಸ್, 3 ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು, 2 ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. 7 ಕಡೆ ಸ್ಪರ್ಧಿಸಿದ್ದ ಬಿಜೆಪಿ ಠೇವಣಿ ಕಳೆದುಕೊಂಡಿದೆ.

ತೀರ್ಥಹಳ್ಳಿ: ಇಲ್ಲಿಯ ಪಟ್ಟಣ ಪಂಚಾಯ್ತಿಯ 15 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 9, ಬಿಜೆಪಿ 6 ಗೆದ್ದಿದೆ.

ಮಡಿಕೇರಿ: 23 ಸ್ಥಾನಗಳ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 16, ಎಸ್ ಡಿಪಿಐ 5, ಕಾಂಗ್ರೆಸ್ 1, ಜೆಡಿಎಸ್ 1 ಸ್ಥಾನ ಗೆದ್ದಿದೆ.

ಹೀಗೆ ಒಟ್ಟು 10 ಕಡೆ ನಡೆದ ಚುನಾವಣೆಯಲ್ಲಿ 7 ಕಡೆ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದೆ. ಕೆಲವು ಕಡೆ ಜೆಡಿಎಸ್ ಒಂದಿಷ್ಟು ಖುಷಿ ಪಟ್ಟಿದೆ. ಬಿಜೆಪಿ ಮುದುಡಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!