ರಾಜಕೀಯ ದುರುದ್ದೇಶದಿಂದ ಲಾಕ್ ಡೌನ್ ಬೇಡ: ದುನಿಯಾ ವಿಜಿ

260

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಓಮಿಕ್ರಾನ್ ಕಾರಣಕ್ಕೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಎಂದು ಸರ್ಕಾರ ಸೆಮಿ ಲಾಕ್ ಡೌನ್ ಹೇರಿದೆ. ಇದರಿಂದಾಗಿ ಚಿತ್ರರಂಗಕ್ಕೂ ಎಫೆಕ್ಟ್ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ನಟ ದುನಿಯಾ ವಿಜಿ, ಲಾಕ್ ಡೌನ್ ಅನ್ನೋ ರಾಜಕೀಯ ದುರುದ್ದೇಶದಿಂದ ಕೂಡಿದ್ದರೆ ಖಂಡಿತ ಬೇಡ ಎಂದಿದ್ದಾರೆ.

ಕರೋನಾದಿಂದ ಈಗಾಗ್ಲೇ ಜನಸಾಮಾನ್ಯರ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಅದರಿಂದ ಇನ್ನು ಸುಧಾರಿಸಿಲ್ಲ. ಸರ್ಕಾರ ತಮ್ಮ ಅನುಕೂಲಕ್ಕಾಗಿ ಲಾಕ್ ಡೌನ್, ಅನ್ ಲಾಕ್ ಮಾಡಬಾರದು. ನಾನು ಯಾವ ಪಕ್ಷದ ಪರ ಆಗಲಿ, ವಿರೋಧವಾಗಲಿ ಇಲ್ಲ. ಜನಸಾಮಾನ್ಯರ ಜೀವನದ ಜೊತೆ ಆಟವಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ನಟ ದುನಿಯಾ ವಿಜಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!