ಏ.30ರ ವರೆಗೂ ಲಾಕ್ ಡೌನ್ ಅನೌನ್ಸ್ ಮಾಡಿದ ಮೊದಲ ರಾಜ್ಯ

424

ಭುವನೇಶ್ವರ: ಇಡೀ ದೇಶದಲ್ಲಿ ಲಾಕ್ ಡೌನ್ ಏಪ್ರಿಲ್ 14ಕ್ಕೆ ಮುಗಿಯಲಿದೆ. ಪ್ರಧಾನಿ ಮೋದಿ ಅವರು ಘೋಷಣೆ ಮಾಡಿದಂತೆ ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತೆ. ಆದ್ರೆ, ಕರೋನಾ ಕಂಟ್ರೋಲ್ ಬಾರದ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಮುಂದುವರೆಸುವ ಚರ್ಚೆ ನಡೆದಿದೆ. ಕರ್ನಾಟಕದಲ್ಲಿಯೂ ಮುಂದುವರೆಸಬೇಕು ಅನ್ನೋ ಸಲಹೆಯನ್ನ ಸಿಎಂಗೆ ನೀಡಲಾಗಿದೆ.

ಇಡೀ ದೇಶದಲ್ಲಿ ಏಪ್ರಿಲ್ 30ರ ತನಕ ಲಾಕ್ ಡೌನ್ ಘೋಷಿಸಿದ ಮೊದಲ ಸರ್ಕಾರವೆಂದ್ರೆ ಓಡಿಶಾ. ಸಿಎಂ ನವೀನ ಪಟ್ನಾಯಕ್ ಲಾಕ್ ಡೌನ್ ಮುಂದುವರೆಸಿರುವ ಕುರಿತು ಘೋಷಣೆ ಮಾಡಿದ್ದಾರೆ. ತಮ್ಮ ರಾಜ್ಯದಲ್ಲಿ ರೈಲು ಹಾಗೂ ವಿಮಾನ ಸೇವೆಯನ್ನ ಏಪ್ರಿಲ್ 30ರ ತನಕ ನಿಲ್ಲಿಸಿಯೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

https://twitter.com/CMO_Odisha/status/1248148154161061889?s=20

ಒಡಿಶಾದಲ್ಲಿ ಇವದುವರೆಗೂ 42 ಕರೋನಾ ಪಾಸಿಟಿವ್ ಕೇಸ್ ದಾಖಲಾಗಿವೆ. ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯವಾಗಬಹುದು ಅನ್ನೋ ಮಾತನ್ನ ಪ್ರಧಾನಿ ನಿನ್ನೆ ಹೇಳಿದ್ರು. ಇದರ ನಡುವೆ ಇಂದು ಒಡಿಶಾದಲ್ಲಿ ಏಪ್ರಿಲ್ 30ರ ತನಕ ಮುಂದುವರೆಸಲಾಗಿದೆ. ಜೂನ್ 17ರ ತನಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಸಾಂದರ್ಭಿಕ ಚಿತ್ರ




Leave a Reply

Your email address will not be published. Required fields are marked *

error: Content is protected !!