ಪ್ರತಿ ಹಳ್ಳಿ.. ಪ್ರತಿ ಮನೆಗೂ ನೀರು: ಸಿಎಂ

336

ಬೆಂಗಳೂರು: ಪ್ರತಿ ಹಳ್ಳಿಯ ಪ್ರತಿ ಮನೆಗೂ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಅಂತಾ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಒಂದು ವರ್ಷದ ಸಾಧನೆ ಕುರಿತು ‘ಮೈತ್ರಿ ಪರ್ವ’ ಪುಸ್ತಕವನ್ನ ವಿಧಾನಸೌಧ ಸಮ್ಮೇಳನ ಸಭಾಗಂಣದಲ್ಲಿ ಬಿಡುಗಡೆ ಮಾಡಿ ಮಾತ್ನಾಡಿದ ಅವರು, ನದಿ ಮೂಲದಿಂದಲೇ ಪ್ರತಿ ಹಳ್ಳಿಯ ಪ್ರತಿ ಮನೆಯ ಬಾಗಿಲಿಗೆ ಕುಡಿಯುವ ನೀರು ತಲುಪಿಸುವ ಯೋಜನೆಯನ್ನ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ಈ ಯೋಜನೆಗಾಗಿ 56 ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತದೆ. ಇದಕ್ಕಾಗಿ ಸಮಗ್ರ ವರದಿ ರೂಪಿಸಲು ಸೂಚಿಸಲಾಗಿದೆ ಎಂದರು. ಬೆಂಗಳೂರಿ ಅಭಿವೃದ್ಧಿ ವಿಚಾರಕ್ಕಾಗಿಯೂ ಮೆಟ್ರೋ ಪಾಲಿಟನ್ ಪ್ರಾಧಿಕಾರದ ಸಭೆಯನ್ನ ಮುಂದಿನ ತಿಂಗಳು ಕರೆಯಲಾಗುವುದು. ಇದರ ಅಧ್ಯಕ್ಷತೆಯನ್ನ ಉಪಮುಖ್ಯಮಂತ್ರಿ ವಹಿಸಿಕೊಳ್ಳಲಿದ್ದಾರೆ ಅಂತಾ ಸಿಎಂ ಕುಮಾರಸ್ವಾಮಿ ತಿಳಿಸಿದ್ರು.

ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರ ತಂದಿರುವ ಪುಸ್ತಕದಲ್ಲಿ ಪ್ರತಿ ಸಚಿವರ ಇಲಾಖೆಗಳಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಕಾಮಗಾರಿಯನ್ನ ತಿಳಿಸಲಾಗಿದೆ. ಕೃಷಿ ಸಾಲ, ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಆದ್ಯತೆ, ಆರೋಗ್ಯ ಕ್ಷೇತ್ರಕ್ಕೆ ಬಲ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸರ್ಕಾರದ ಪಾತ್ರ, ಮಾತೃಶ್ರೀ ಯೋಜನೆ, ಬಡವರ ಬಂಧು ಯೋಜನೆ ಸೇರಿದಂತೆ ಹಲವು ವಿಚಾರಗಳನ್ನ ಇದರಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!