ಮಾಲ್ ತೆರೆಯಬಹುದು.. ಆದ್ರೆ

322

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಬಂದ್ ಮಾಲ್ ಗಳು ಜೂನ್ 8ರಿಂದ ದೇಶದಾದ್ಯಂತ ಶುರು ಮಾಡಬಹುದು ಎಂದು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದ್ರೆ, ಮಾಲ್ ಗಳಲ್ಲಿರುವ ಸಿನಿಮಾ ಥಿಯೇಟರ್ ಗಳನ್ನ ಓಪನ್ ಮಾಡುವಂತಿಲ್ಲವೆಂದು ಹೇಳಿದೆ. ಇದರ ಜೊತೆಗೆ ಕೆಲ ಷರತ್ತುಗಳನ್ನ ನೀಡಿದ್ದು, ಅದರಲ್ಲಿ ಕೆಲವು ಇಲ್ಲಿವೆ ನೋಡಿ..

ಮಾಲ್ ಎಂಟ್ರಿಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಅಳವಡಿಸಬೇಕು

ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಕೈ ಗ್ಲೌಸ್ ಧರಿಸಬೇಕು

ಗ್ರಾಹಕರು ಮಾಸ್ಕ್ ಧರಿಸಿಕೊಂಡು ಬರಬೇಕು

ಕೋವಿಡ್ 19 ಕುರಿತು ಪೋಸ್ಟ್, ಆಡಿಯೋ, ವಿಡಿಯೋ ಮೂಲಕ ಜಾಗೃತಿ ಮೂಡಿಸಬೇಕು

ಮಕ್ಕಳ ಆಟದ ಪ್ರದೇಶವನ್ನ ಬಂದ್ ಮಾಡಬೇಕು

ಪಾರ್ಕಿಂಗ್, ಮಾಲ್ ಆವರಣದಲ್ಲಿ ಜನರ ನಿಯಂತ್ರಣ ಮಾಡಬೇಕು

ಲಿಫ್ಟ್ ಬಳಸುವಂತಿಲ್ಲ

ಹಿರಿಯರು, ಗರ್ಭಿಣಿಯರು, ವೈದ್ಯಕೀಯ ಸಮಸ್ಯೆ ಇದ್ದರತ್ತ ಗಮನಹರಿಸಬೇಕು

ಹೀಗೆ ಹಲವು ಮಾರ್ಗಸೂಚಿಗಳನ್ನ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ. ಈ ಎಲ್ಲ ನಿಯಮಗಳನ್ನ ಪಾಲನೆ ಮಾಡಿಕೊಂಡು ಮಾಲ್ ಗಳು ಜೂನ್ 8ರಿಂದ ಕಾರ್ಯಾರಂಭ ಮಾಡಬಹುದು ಎಂದು ಸೂಚಿಸಿದೆ.




Leave a Reply

Your email address will not be published. Required fields are marked *

error: Content is protected !!