ಐತಿಹಾಸಿಕ ಪ್ರಸಿದ್ಧ ಹಂಪಿಯಲ್ಲಿ ಭೂಕಂಪನ

348

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ವಿಶ್ವ ಪಾರಂಪರಿಕ ತಾಣ, ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿರುವ ಹಂಪಿಯಲ್ಲಿ ಇಂದು ಬೆಳಗ್ಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.

ಇಂದು ಬೆಳಗ್ಗೆ 6.55ರ ಸುಮಾರಿಗೆ ಹಂಪಿಯಲ್ಲಿ ಭೂಕಂಪನ ಆಗಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ಸ್ಪಷ್ಟಪಡಿಸಿದೆ. ಇದರ ಜೊತೆಗೆ ಝಾರ್ಖಂಡ್ ನಲ್ಲಿಯೂ ಭೂಕಂಪನವಾಗಿದೆ. ಝೇಮ್ಶೆಡ್ ಪುರದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ.

https://twitter.com/ANI/status/1268723767162703872?s=20

ಭೂಕಂಪನದಿಂದ ಇದುವರೆಗೂ ಯಾವುದೇ ರೀತಿಯ ಜೀವ ಹಾನಿಯಾದ ಬಗ್ಗೆ ವರದಿ ಬಂದಿಲ್ಲ. ಈ ಬಗ್ಗೆ ಮಾಹಿತಿಯನ್ನ ಕಲೆ ಹಾಕಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!