ಪ್ರಬಲ ಭೂಕಂಪನಕ್ಕೆ 130ಕ್ಕೂ ಹೆಚ್ಚು ಜನರು ಬಲಿ

212

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಈಠ್ಮಂಡು: ನೆರೆಯ ದೇಶವಾದ ನೇಪಾಳದಲ್ಲಿ ಭಾರೀ ಭೂಕಂಪನವಾಗಿದೆ. ಇದರಿಂದಾಗಿ 130ಕ್ಕೂ ಹೆಚ್ಚು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ ಭೂಕಂಪನ ಸಂಭವಿಸಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.

ನೇಪಾಳದ ಪಶ್ಚಿಮ ಭಾಗದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಹಲವಾರು ಜನರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರುಕುಮ್ ವೆಸ್ಟನ್ ಜಿಲ್ಲಾಧಿಕಾರಿ ಹರಿಪ್ರಸಾದ್ ಪಂತ್ ಹೇಳಿದ್ದಾರೆ. ಘಟನೆ ಸಂಬಂಧ ಪ್ರಧಾನಿ ಪುಷ್ಪ್ ಕಮಲ್ ದಹಲ್ ಆತಂಕ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!