1,400 ರೂಪಾಯಿ ಮೌಲ್ಯದ ನಾಣ್ಯ 138 ಕೋಟಿಗೆ ಮಾರಾಟ

268

ಪ್ರಜಾಸ್ತ್ರ ಲೈಫ್ ಸ್ಟೈಲ್

ಈ ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಅಸಾಧ್ಯವಾಗುವ ಘಟನೆಗಳು ನಡೆಯುತ್ತಿವೆ. ಯಾಕಂದ್ರೆ, ದುಡ್ಡು ಅನ್ನೋದು ಕಾಲ ಕಸವಾದ ಜನರಿಗೆ ಒಂದಿಷ್ಟು ಫ್ಯಾಶನ್ ಇರುತ್ತೆ. ಯಾರ ಬಳಿಯೂ ಇರದ ವಸ್ತುಗಳು ನಮ್ಮ ಬಳಿ ಇರಬೇಕು. ಅದಕ್ಕೆ ಎಷ್ಟು ಖರ್ಚಾದ್ರೂ ಸರಿಯೇ ಅಂತಾರೆ. ಹೀಗಾಗಿ 1,400 ರೂಪಾಯಿ ಮೌಲ್ಯದ ಬಂಗಾರಣ ನಾಣ್ಯವನ್ನ 138 ಕೋಟಿ ರೂಪಾಯಿ ಕೊಟ್ಟು ಖರೀದಿಸಲಾಗಿದೆ.

ನ್ಯೂಯಾರ್ಕ್ ನಲ್ಲಿ ಕಳೆದ ಮಂಗಳವಾರ 1933ರ ಡಬಲ್ ಈಗಲ್ ಚಿತ್ರವಿರುವ ಬಂಗಾರದ ನಾಣ್ಯವೊಂದು ಹರಾಜು ಆಗಿದೆ. ಇದಕ್ಕೆ 138 ಕೋಟಿ ರೂಪಾಯಿ ಕೊಟ್ಟು ಖರೀದಿಸಲಾಗಿದೆ ಎಂದು ರೈಯಿಟರ್ಸ್ ಪತ್ರಿಕೆ ವರದಿ ಮಾಡಿದೆ. ಇದರ ಜೊತೆಗೆ ಅಪರೂಪದ ಟಿಕೆಟ್ ವೊಂದು 60 ಕೋಟಿಗೆ ಮಾರಾಟವಾಗಿದೆಯಂತೆ.

ಈ ನಾಣ್ಯವನ್ನ 2002ರಲ್ಲಿ ಶೂ ಡಿಸೈನರ್ ಹಾಗೂ ಸಂಗ್ರಹಕ ಸ್ಟುವರ್ಟ್ ವೈಟ್ಜ್ಮನ್ 55 ಕೋಟಿ ಕೊಟ್ಟು ಖರೀದಿಸಿದ್ರಂತೆ. 70-100 ಕೋಟಿಗೆ ಮಾರಾಟವಾಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಆಗಿದ್ದು, ಬರೋಬ್ಬರಿ 130 ಕೋಟಿ ಮಾರಾಟವಾಗಿ ಹಿಂದಿನ ಎಲ್ಲ ದಾಖಲೆ ಮುರಿದಿದೆ.




Leave a Reply

Your email address will not be published. Required fields are marked *

error: Content is protected !!