ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ಮಹಾತ್ಮ ಗಾಂಧೀಜಿ ಅವರು ಹಾಕಿಕೊಳ್ಳುತ್ತಿದ್ದ ಕನ್ನಡಕ ಬರೋಬ್ಬರಿ 2.54 ಕೋಟಿ ರೂಪಾಯಿ ಹರಾಜುಗೊಂಡಿದೆ. ಬ್ರಿಟನ್ ನಲ್ಲಿ ಇಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ 2,60,000 ಪೌಂಡ್ ಗೆ ಹರಾಜಾಗಿದೆ.
ಕರೋನಾ ಹಿನ್ನೆಲೆಯಲ್ಲಿ ಪೂರ್ವ ಬ್ರಿಸ್ಟಾಲ್ ಕಂಪನಿ ಆನ್ ಲೈನ್ ಮೂಲಕ ಹರಾಜು ಮಾಡಿದೆ. ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದ ಫೋಟೋ ವೈರಲ್ ಆಗಿತ್ತು. ಬಳಿಕ ಕಂಪನಿ ವಿಡಿಯೋ ಕಾಲಿಂಗ್ ಮೂಲಕ ಹರಾಜು ಹಾಕಿದೆ.
ಗಾಂಧೀಜಿ ಇದನ್ನ ಒಬ್ಬರಿಗೆ ಕೊಡುಗೆಯಾಗಿ ನೀಡಿದ್ರಂತೆ. ಈ ಬಗ್ಗೆ ಬರೆದಿದ್ದ ಪತ್ರದ ಸಮೇತ ಲೆಟರ್ ಬಾಕ್ಸ್ ನಲ್ಲಿ ಕಂಪನಿಗೆ ಬಂದಿತ್ತು ಎಂದು ಹೇಳಿಕೊಂಡಿದೆ. ಇದೀಗ ಈ ಕನ್ನಡ ಬರೋಬ್ಬರಿ 2.54 ಕೋಟಿ ರೂಪಾಯಿಗೆ ಖರೀದಿಸಲಾಗಿದೆ.