ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ

327

ರಾಂಚಿ: ಟೀಂ ಇಂಡಿಯಾದ ಭರ್ಜರಿ ಆಟದಿಂದಾಗಿ ಸೌಥ್ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನ ಅನಾಯಾಸವಾಗಿ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್ ಆಡಿದ್ದ ಭಾರತ 9ವಿಕೆಟ್ ನಷ್ಟಕ್ಕೆ 497 ರನ್ ಬಾರಿಸಿತ್ತು. ಸೌಥ್ ಆಫ್ರಿಕಾ ಎರಡೂ ಇನ್ನಿಂಗ್ಸ್ ಆಡಿ ಇಷ್ಟು ರನ್ ಗಡಿ ದಾಟಿ ಹೋಗಲು ಆಗ್ಲಿಲ್ಲ.

ಮೊದಲ ಇನ್ನಿಂಗ್ಸ್ 162 ಮತ್ತು 2ನೇ ಇನ್ನಿಂಗ್ಸ್ ನಲ್ಲಿ 133 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸರಣಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿತು. ಇದ್ರಿಂದಾಗಿ 202 ರನ್ ಗಳ ಇನ್ನಿಂಗ್ಸ್ ಗೆಲುವನ್ನ ಭಾರತ ದಾಖಲಿಸಿತು. ಈ ಮೂಲಕ ಟೀಂ ಇಂಡಿಯಾ 3-0 ಅಂತರದಿಂದ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿಕೊಂಡಿತು.ಈ ಗೆಲುವು ತವರು ನೆಲದಲ್ಲಿ ಭಾರತದ 11ನೇ ಸರಣಿ ಗೆಲುವಾಗಿದೆ.




Leave a Reply

Your email address will not be published. Required fields are marked *

error: Content is protected !!