ನದಿಗೆ ನಾಣ್ಯ ಎಸೆಯುವುದರ ನಂಬಿಕೆ ಮತ್ತು ವೈಜ್ಞಾನಿಕ ಕಾರಣವೇನು?

428

ಪ್ರಜಾಸ್ತ್ರ ಸುದ್ದಿ

ಭಾರತ ಹಲವು ಧರ್ಮ, ಜಾತಿ, ಮತ, ಪಂಥಗಳಿಂದ ಕೂಡಿದ ದೇಶ. ಹೀಗಾಗಿ ಇಲ್ಲಿ ಸಾಕಷ್ಟು ಆಚರಣೆಗಳು, ನಂಬಿಕೆಗಳು ಇಂದಿಗೂ ಜೀವಂತವಾಗಿವೆ. ನಂಬಿಕೆ ಅನ್ನೋದು ಪ್ರತಿಯೊಂದು ಧರ್ಮದಲ್ಲಿದೆ. ಅಂತಹ ನಂಬಿಕೆಗಳಲ್ಲಿ ನದಿಗೆ ನಾಣ್ಯ ಎಸೆಯುವುದು. ಬಹುತೇಕರಿಗೆ ಇದು ಗೊತ್ತು. ಹಿರಿಯರು ಹೇಳಿದ್ದಕ್ಕೆ ಕೆಲವೊಮ್ಮೆ ಅನೇಕರು ನಾಣ್ಯವನ್ನ ನದಿಗೆ ಎಸೆದಿರುತ್ತಾರೆ. ಹಾಗಾದ್ರೆ, ಇದರ ಹಿಂದಿನ ನಂಬಿಕೆ ಹಾಗೂ ವೈಜ್ಞಾನಿಕ ಕಾರಣವೇನು?

ಶತ ಶತಮಾನಗಳಿಂದ ನದಿಗೆ ನಾಣ್ಯ ಎಸೆದುಕೊಂಡು ಬರಲಾಗ್ತಿದೆ. ಪ್ರಯಾಣ ಮಾಡುವಾಗ ಎದುರಾಗುವ ನದಿಗಳಿಗೆ ಕುಳಿತ ಜಾಗದಲ್ಲಿ ನಾಣ್ಯ ಎಸೆದು ನಮಸ್ಕಾರ ಮಾಡಲಾಗುತ್ತೆ. ಹೀಗೆ ಮಾಡುವುದರಿಂದ ಆರ್ಥಿಕವಾಗಿ ವೃದ್ಧಿಯಾಗುತ್ತೆ, ಅದೃಷ್ಟವಾಗುತ್ತೆ ಅನ್ನೋದು ನಂಬಿಕೆ.

ವೈಜ್ಞಾನಿಕ ಕಾರಣ ನೋಡಿದ್ರೆ, ನಾಣ್ಯ ನೀರಿನಲ್ಲಿ ಬಿದ್ದಾಗ ಧೂಳಿನ ಕಣಗಳನ್ನ ಸೆಳೆದುಕೊಳ್ಳುವ ಗುಣವಿದೆ. ಹಿಂದೆ ತಾಮ್ರದ ನಾಣ್ಯಗಳು ಚಲಾವಣೆಯಲ್ಲಿದ್ದವು. ತಾಮ್ರಕ್ಕೂ ನೀರಿನ ಅವಿನಾಭಾವ ಸಂಬಂಧವಿದೆ. ಹೀಗೆ ನಾಣ್ಯ ಎಸೆದಾಗ ಧೂಳಿನ ಕಣಗಳು ಕೆಳಭಾಗಕ್ಕೆ ಹೋಗುತ್ತೆ. ಶುದ್ಧ ನೀರು ಕುಡಿಯಲು ಸಿಗುತ್ತೆ. ಹೀಗಾಗಿ ನಮ್ಮ ಹಿರಿಯರು ಇದನ್ನು ಮಾಡಿಕೊಂಡು ಬಂದರು. ಅದು ಕಾಲಾನಂತರದಲ್ಲಿ ನಂಬಿಕೆಯಾಗಿ ಬದಲಾಗಿದೆ.




Leave a Reply

Your email address will not be published. Required fields are marked *

error: Content is protected !!